ಬಳ್ಳಾರಿ : ಪ್ರತಿದಿನ ಶಾಲಾ ಸಮಯ ಬೆಳಿಗ್ಗೆ 10 ಗಂಟೆಗೆ ನಿಗದಿತವಾದರೇ ಇಲ್ಲಿ ಶಿಕ್ಷಕರೇ ಪ್ರತಿ ದಿನ 11:45 ಕ್ಕೆ ಹಾಜರಾಗ್ತಿದ್ದಾರೆ .ಇಲ್ಲಿ ಶಿಕ್ಷಣ ಪಡೆಯೋಕೆ ಶಿಕ್ಷಕರಾ ಅಥವಾ ಮಕ್ಕಳಾ ಬರುತ್ತಿರುವುದು.ಆದ್ರೂ ಇದರ ಬಗ್ಗೆ ಯಾರು ಪ್ಷಶ್ನೆ ಮಾಡುವ ಹಾಗಿಲ್ಲ, ಬಿಇಓ ಮತ್ತು ಶಾಲಾ ಎಂಡಿಸಿ ಸದಸ್ಯರು ಕಣ್ಣಿದ್ದು ಕುರುಡರಾಗಿ ವರ್ತಿಸುತ್ತಿದ್ದಾರೆ. ಮಕ್ಕಳಿಗೆ ಬೋಧನೆ ಮಾಡುವ ಸಮಯದಲ್ಲಿ ಇವರು ಕಾಲಹರಣ ಮಾಡುತ್ತಾ ಶಾಲೆಗೆ ತಡಚವಾಗಿ ಬರುವುದು ಒಂದು ಕಥೆಯಾದರೆ, ಮೊಬೈಲ್ ಹಿಡಿದು ಕಾಲ ಕಳೆಯೋದು ಮತ್ತೊಂದೆಡೆ. ಮಕ್ಕಳಿಗೆ ಬುದ್ದಿ ಹೇಳುವ ಶಿಕ್ಷಕರೇ ಬುದ್ದಿ ಹೇಳಿಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.ಇಲ್ಲಿ ಇವರು ಆಡಿದ್ದೇ ಆಟ ಮಾಡಿದ್ದೇ ಪಾಠ ಎಂಬಂತಾಗಿದೆ ಇಲ್ಲಿನ ಶಿಕ್ಷಕರ ಕಾರ್ಯವೈಖರಿ ಈ ಕುರಿತು ಯಾರೂ ಪ್ರಶ್ನಿಸುವಂತಿಲ್ಲ. ಇಲ್ಲಿನ ಪರಿಸ್ಥಿತಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.ಇಷ್ಟೇಲ್ಲ ನಡೆಯುತ್ತಿರುವುದು ಬಳ್ಳಾರಿ ಜಿಲ್ಲೆಯ ನೂತನ ತಾಲ್ಲೂಕು ಕಂಪ್ಲಿಯ ಬಳಿಯ ಎಮ್ಮಿಗನೂರ್ ಗ್ರಾಮದ ಬಸವಪಟ್ಟಣದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿದ್ಯಾವತಿ ಕಾರ್ಯವೈಖರಿ, ಈ ಶಿಕ್ಷಕಿ ಮಕ್ಕಳಿಗೆ ಕಲಿಸುವುದುಕ್ಕಿಂತ ಮೊಬೈಲ್ ನಲ್ಲಿ ಸಮಯ ಕಳೆಯುವುದೇ ಹೆಚ್ಚು. ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಈ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
