
ಸಿರವಾರ: ಇ- ಸ್ವಚ್ಛತಾ ಸೇವಾ ಮೂಲಕ ಪಟ್ಟಣದ ಸ್ವಚ್ಛತೆ ಹೆಚ್ಚಿಸಿದ ಮಾರುತಿ ಪೌರ ಕಾರ್ಮಿಕರು, ಕಾರ್ಮಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು.ಇ ಸ್ವಚ್ಛತಾ ಸೇವಾ ಅಭಿಯಾನದಡಿಯಲ್ಲಿ , ಕಸ ಹಾಕುವ ಜಾಗದಲ್ಲಿ ಪೌರಕಾರ್ಮಿಕರಿಂದ ರಂಗೋಲಿ ಹಾಕುವ ಮೂಲಕ ಸ್ವಚ್ಛತೆಗೆ ಮೊದಲ ಅಧ್ಯತೆಯನ್ನ ನೀಡಲಾಗುತ್ತಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳಿಂದ ಈ ಸ್ವಚ್ಛತಾ ಸೇವಾ ಕಾರ್ಯ ನಡೆಸುತ್ತಿದ್ದಾರೆ. ಸಾರ್ವಜನಿಕರು ಕಸವನ್ನ ಕಸದ ವಾಹನಗಳಿಗೆ ಹಾಕದೆ ಒಂದು ಪ್ರದೇಶದಲ್ಲಿ ಎಸೆಯುತ್ತಿರುವುದರಿಂದ, ಅಂತಹ ಸ್ಥಳಗಳಲ್ಲಿ ಪಂಚಾಯತ್ ಸಿಬ್ಬಂದಿ ಶ್ರೀ ಮಾರುತಿ ಮತ್ತು ಪೌರಕಾರ್ಮಿಕರು ಮುಂಜಾನೆಯಿಂದ ಕಸವನ್ನ ತೆರವುಗೊಳಿಸಿ ಆ ಜಾಗದಲ್ಲಿ ರಂಗೋಲಿ ಹಾಕುವ ಮೂಲಕ ಕವಿತಾಳ ಪಟ್ಟಣವನ್ನ ಇನ್ನಷ್ಟು ಸುಂದರವಾಗಿಸಲುಕಾರಣಕರ್ತರಾಗಿದ್ಧಾರೆ. , ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ಆದೇಶದ ಮೇರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದ್ಧಾರೆ.
