ಡಾ. ವಿಷ್ಣುವರ್ಧನ್ ಅವರು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಮೂಲತಃ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು. ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. ದಂಪತಿಗೆ ೬ ಜನ ಸಹೋದರ/ಸಹೋದರಿಯರು ಇದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಶಿಕ್ಷಣ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು.
ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು.1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹʼಸಿನೆಮಾ 25 ವಾರಗಳನ್ನು ಪೂರೈಸಿತು ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ ‘ಸಾಹಸಸಿಂಹ’ ಎಂಬ ಬಿರುದು ಬಂದಿತ್ತು.
ವಿಷ್ಣುವರ್ಧನ್ ಅವರು ನಂಬಲರ್ಹವಾದ ದುರ್ಬಲತೆಯನ್ನು ಚಿತ್ರಿಸುವುದಕ್ಕೆ ಹೆಸರುವಾಸಿಯಾಗಿದ್ದರು. ಅವರ ಪ್ರಸಿದ್ಧ ಚಲನಚಿತ್ರ ಬಂಧನ (1984) ಇದಕ್ಕೆ ಒಂದು ಉದಾಹರಣೆಯಾಗಿದೆ ವಿಷ್ಣುವರ್ಧನ್ ರವರು ನಟಿಸಿದ ವಯಸ್ಸಿಗೆ ಮೀರಿದ ಪ್ರೇಮಕಥೆಯ ಬಗ್ಗೆ ಯೋಚಿಸುವಂತೆ ಮಾಡುವ ಚಿತ್ರ. ವಿಷ್ಣುವರ್ಧನ್ ಸರ್ ಅಂತಹ ಪಾತ್ರಕ್ಕೆ ಅಗತ್ಯವಾದ ಆಂತರಿಕ ಸಂಘರ್ಷಗಳು ಮತ್ತು ಸೂಕ್ಷ್ಮ ಅಭಿನಯವು ಬಂಧನ ಚಿತ್ರದಲ್ಲಿ ಸಾಬೀತಾಗಿದೆ.ಒಟ್ಟಿನಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಯಾವೆಲ್ಲಾ ರೀತಿಯಲ್ಲಿ ಆಚರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಏನೇ ಆಗಲಿ ಏನೇ ಹೋಗಲಿ, ಕನ್ನಡದ ಇನ್ನೊಬ್ಬರಿಗೆ ತುಂಬಾ ತಡವಾಗಿಯಾದರೂ ‘ಕರ್ನಾಟಕ ರತ್ನ‘ ಪ್ರಶಸ್ತಿ ದೊರಕಿದೆ ಎಂಬುದು ಅಭಿಮಾನಿಗಳೂ ಸೇರಿದಂತೆ ಕನ್ನಡದ ಎಲ್ಲಾ ಸಿನಿಪ್ರೇಕ್ಷಕರಿಗೆ ಸಂತಸ ತಂದಿರುವ ಸಂಗತಿ.
೨೦೦೯ ರಲ್ಲಿ ಅವರು ನಿಧನರಾಗುವ ಮೊದಲು ಅವರು ನಟಿಸಿದ ಕೊನೆಯ ಕೆಲವು ಚಲನಚಿತ್ರಗಳು ಅವರ ಪ್ರತಿಭೆ ಕ್ಷೀಣಿಸಲಿಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಕಲ್ಪನೆಯ ಕೊರತೆಯಿರುವ ನಿರ್ದೇಶಕರು ಅವರಿಗೆ ವಿಶಿಷ್ಟವಾದ ದಯಾಳು, ತ್ಯಾಗಮಯಿ-ರಕ್ಷಕ ರೀತಿಯ ಪಾತ್ರಗಳನ್ನು ಬರೆದರು.ಇನ್ನೂ ಮಲಯಾಳಂನಲ್ಲಿ ಮಮ್ಮುಟ್ಟಿ ಮತ್ತು ಮೋಹನ್ ಲಾಲ್, ತಮಿಳಿನಲ್ಲಿ ರಜನಿಕಾಂತ್ ಮತ್ತು ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರಂತಹ ಹಿರಿಯ ತಾರೆಯರು ತಮ್ಮ ವೃತ್ತಿಜೀವನದ ಅಂತ್ಯದಲ್ಲಿ ಪ್ರಯೋಗ ಮಾಡಲು ಧೈರ್ಯ ಮಾಡಿದ್ದಾರೆ. ಅದೇ ರೀತಿ, ಬೆಂಗಳೂರಿನಲ್ಲಿ ತಮ್ಮ ನೆಚ್ಚಿನ ತಾರೆಯ ಸ್ಮಾರಕವನ್ನು ಸ್ಥಾಪಿಸಲು ಹೋರಾಡುತ್ತಿರುವ ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಗಳು ಅವರನ್ನು ಹಿಂದೆಂದೂ ನೋಡಿರದ ಪಾತ್ರಗಳಲ್ಲಿ ನೋಡಲು ಇಷ್ಟಪಡುತ್ತಿದ್ದರು.
ಕನ್ನಡ ಚಿತ್ರರಂಗದಲ್ಲಿ ಕುಚಿಕು ಗೆಳೆಯರಾಗಿ ಇವತ್ತಿಗೂ ಅಭಿಮಾನಿಗಳ ಹೃದಯವನ್ನು ಆವರಿಸಿರುವ ಇಬ್ಬರು ದಿಗ್ಗಜ ನಟರೆಂದರೆ ಅದು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್. ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾಗಾಗಿ ಹೊಸ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ಚಿಗುರು ಮೀಸೆಯ ತೀಕ್ಷ್ಣ ಕಣ್ಣಿನ ಹುಡುಗ ವಿಷ್ಣುವರ್ಧನ್ ನಾಯಕನಾಗಿ ಆಯ್ಕೆಯಾಗಿದ್ದರು. ಇದೇ ಚಿತ್ರದಲ್ಲಿ ಜಲೀಲನ ಪಾತ್ರಕ್ಕಾಗಿ ತುಸು ಪುಂಡನ ಲುಕ್ ಇರುವ ನಟನಿಗಾಗಿ ಪುಟ್ಟಣ್ಣ ಹುಡುಕಾಡುತ್ತಿದ್ದರು. ಆಗ ರೆಬಲ್ ಸ್ಟಾರ್ ಅಂಬರೀಶ್ ಜಲೀಲನ ಪಾತ್ರಕ್ಕೆ ಆಯ್ಕೆಯಾಗಿದ್ದರು.ವಿಷ್ಣುವರ್ಧನ್ ಅವರದು ಸ್ವಲ್ಪ ತಮಾಷೆ ಮಾಡುವ ವ್ಯಕ್ತಿತ್ವ. ಹೀಗಾಗಿ ಅಂಬರೀಶ್ಗೆ ವಿಷ್ಣುವರ್ಧನ್ ಬಹಳ ಬೇಗನೆ ಇಷ್ಟವಾಗಿದ್ದರು. ಈ ಚಿತ್ರದಲ್ಲಿ ವಿಷ್ಣು ಹೀರೋ ಆಗಿದ್ರೆ, ಅಂಬರೀಶ್ ವಿಲನ್ ರೋಲ್ನಲ್ಲಿ ಮಿಂಚಿದ್ದರು. ನಿಜ ಜೀವನದಲ್ಲಿ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಲು ಈ ಚಿತ್ರವೂ ಕಾರಣವಾಯಿತು. ಜಲೀಲನ ಪಾತ್ರದಲ್ಲಿದ್ದ ಅಂಬರೀಶ್ ನಟಿ ಆರತಿ ಅವರನ್ನು ರೇಗಿಸುತ್ತಿದ್ದರೆ, ಇತ್ತ ವಿಷ್ಣುವರ್ಧನ್ ಸೈಕಲ್ನಲ್ಲಿ ಬಂದು ಫೈಟ್ ಮಾಡುವ ದೃಶ್ಯ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು.ಸಾಹಸಸಿಂಹ ವಿಷ್ಣು ಬಗ್ಗೆ ಅಂಬಿಗೆ ಎಲ್ಲಿಲ್ಲದ ಅಭಿಮಾನ. ಇಬ್ಬರೂ ಗಂಟೆಗಟ್ಟಲೆ ಕೂತು ಹರಟೆ ಹೊಡೆಯುತ್ತಾ, ಒಬ್ಬರ ಕಾಲು ಮತ್ತೊಬ್ಬರು ಎಳೆದು ನಕ್ಕು ನಲಿಯುತ್ತಿದ್ದರು. ಚಿತ್ರದುರ್ಗದಲ್ಲಿ ನಾಗರಹಾವು ಶೂಟಿಂಗ್ ಸಂದರ್ಭದಲ್ಲಿ ಇಬ್ಬರೂ ಒಂದೇ ರೂಂನಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭವಿತ್ತು. ಈ ಸಂದರ್ಭದಲ್ಲಂತೂ ಇಬ್ಬರೂ ಮತ್ತಷ್ಟು ಕ್ಲೋಸ್ ಆದರು. ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ಶೂಟಿಂಗ್ ಯಾವಾಗ ಬೆಂಗಳೂರಿಗೆ ಶಿಫ್ಟ್ ಆಯ್ತೋ ಆಗ ಅಂಬರೀಶ್ ಸಿನಿಮಾ ಶೂಟಿಂಗ್ ಬಿಡುವು ಸಿಕ್ಕಾಗೆಲ್ಲಾ ವಿಷ್ಣುವರ್ಧನ್ ಮನೆಗೆ ಹೋಗುತ್ತಿದ್ದರು. ಬಹುಶಃ ನಾಗರಹಾವು ಚಿತ್ರದ ಮೂಲಕ ಚಿಗುರಿದ ಸ್ನೇಹ ಆದರ್ಶ ಸ್ನೇಹವಾಗುತ್ತೆ ಅಂತಾ ಅವರಿಬ್ಬರಿಗೂ ಅಂದು ಅರಿವೇ ಇರಲಿಲ್ಲ.
ಓ ಗೆಳೆಯ ನಿನಗೆ ಸ್ಯಾಣೆ ಕೋಪ ಕಣೋ..: ಇಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಆದರೆ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗಿದ್ದು ಡಿ.ರಾಜೇಂದ್ರ ಬಾಬು ನಿರ್ದೇಶನದ ದಿಗ್ಗಜರು ಸಿನಿಮಾದಲ್ಲಿ. ಈ ಚಿತ್ರದಲ್ಲಿ ಅಂಬರೀಶ್ ‘ಓ ಗೆಳೆಯ ನಿನಗೆ ಸ್ಯಾಣೆ ಕೋಪ ಕಣೋ’ ಅಂತಾ ವಿಷ್ಣುವರ್ಧನ್ ಬಗ್ಗೆ ಹಾಡುವ ಗೀತೆ ಗೆಳೆತನದ ಎವರ್ಗ್ರೀನ್ ಹಾಡು ಆಗಿದೆ.
