ರಾಯಚೂರು: ರಾಯಚೂರಿನ ಅಂಗನವಾಡಿಯಲ್ಲಿ ಸುಸಜ್ಜಿತ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ಕೊರತೆಯಿಂದಾಗಿ ಅಂಗನವಾಡಿ ಕೇಂದ್ರದ ಅವ್ಯವಸ್ಥೆ ಕಂಡ ಅಧಿಕಾರಿಗಳು ಅಂಗನವಾಡಿ ಮುಖ್ಯಸ್ಥರ ಮೇಲೆ ಕೆಂಡಾಮಂಡಲವಾಗಿದ್ದಾರೆ.ಲಿಂಗಸಗೂರಿನ ಗೌಡುರುಗ್ರಾಮಕ್ಕೆ ಭೆಟಿ ನೀಡಿದ ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಲ್ಲಿನ ಅಂಗನವಾಡಿಯಲ್ಲಿನ ಕಟ್ಟಡದ ಅವ್ಯವಸ್ಥೆಯನ್ನು ಗಮನಿಸಿದ ನ್ಯಾಯಾಧೀಶರು ಮೇಲ್ವಿಚಾರಕರು ಮತ್ತು ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಡಿಪಿಓಇ ಗೆ ತರಾಟೆಗೆ ತೆಗೆದುಕೊಂಡು ದೂರವಾಣಿ ಮೂಲಕ ಛಳಿ ಬಿಡಿಸಿದರು.ಇನ್ನೂ ಕೆಲವೇ ವಾರಗಳಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸಬೇಕು ಮತ್ತು ಮಕ್ಕಳಿಗೆ ಸುಸಜ್ಜಿತ ಮೂಲಸೌಕರ್ಯಗಳ ಜೊತೆಗೆ ಉತ್ತಮ ವಾತಾವರಣ ಕಾಪಾಡಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಮಂಜುಳಾ ಉಂಡಿ, ಪ್ರಧಾನ ಕಾರ್ಯದರ್ಶಿ ಅಂಬಣ್ಣ ಕೆ. ಭೇಟಿ ನೀಡಿ ಪರಿಶೀಲಿಸಿ ಅಂಗನವಾಡಿ ಮುಖ್ಯಸ್ಥರ ಮೇಲೆ ಎಚ್ಚರಿಕೆ ನೀಡಿದರು.
