ಚಿತ್ರದುರ್ಗ: ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕು ಕಚೇರಿ ಎದುರು ರೈತರು ಈರುಳ್ಳಿ- ಟೊಮ್ಯಾಟೋ ಬೆಳೆ ಸುರಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ರೈತರು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಈರುಳ್ಳಿ, ಟೊಮ್ಯಾಟೋ ಹಾಗೂ ಶೇಂಗಾ ಬೆಳೆಗಳಿಗೆ ಬೆಲೆ ಸಿಗದೆ ಕುಸಿತ ಕಂಡಿದ್ದು, ಕೂಡಲೇ ಬೆಳೆನಷ್ಟ ಪರಿಹಾರ ನೀಡಿ. ಕೇಂದ್ರ ಸರ್ಕಾಋ ಈರುಳ್ಳಿಗೆ 1 ಕ್ವಿಂಟಾಲ್ಗೆ 5000 ರೂಪಾಯಿ ಮತ್ತು ಟೊಮ್ಯಾಟೋಗೆ 5000 ಬೆಂಬಲ ಬೆಲೆ ಯಲ್ಲಿ ಖರೀದಿಸಬೇಕು ಮತ್ತು ವಿಮೆಗೆ ಸರಿಯಾದ ಹಣ ದೊರಕುತ್ತಿಲ್ಲ, ರೈತರಿಗೆ ಉಪಯುಕ್ತವಾಗುವಂತೆ ತಾಲ್ಲೂಕು ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಉತ್ತಮ ಬೆಲೆ ನಿಗಧಿಪಡಿಸಿ ಖರೀದಿಸಬೇಕು. ಇಲ್ಲವಾದರೆ ರೈತ ವರ್ಗದವರು ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ, ರೈತರಿಗೆ ಉತ್ತಮ ರೀತಿಯ ಬೆಂಬಲ ಬೆಲೆ ಸಿಗದಿದ್ದರೆ ಆತ್ಮಹತ್ಯೆ ಒಂದೇ ದಾರಿ ಎಂದರು. ನಮ್ಮನ್ನಾಳುವ ಸರ್ಕಾರ ಈ ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿದರು.
