ಬೆಂಗಳೂರಿನ ರಸ್ತೆಗಳ ಹದಗೆಟ್ಟ ಪರಿಸ್ತಿತಿಯ ಕುರಿತು ಇಂದು ಸಿಎಂ ಸಿದ್ದರಾಮಯ್ಯರವರು ಜಿಬಿಎ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, ಸಭೆಯಲ್ಲಿ ಜಿಬಿಎಗೆ ಸಂಬಂದಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಬೆಂಗಳೂರಿನ ಕೆಲ ಸಚಿವರು ಭಾಗಿಯಾಗಿದ್ದರು.ಬೆಂಗಳೂರನ್ನು ಗ್ರೇಟರ್ ಬೆಂಗಳೂರನ್ನಾಗಿಸಲು ಪ್ರಯತ್ನ ಮಾಡುತ್ತಿರುವ ಹಿನ್ನೆಲೆ ಬೆಂಗಳೂರಿನಲ್ಲಿ ತಾಂಡವವಾಡುತ್ತಿರುವ ರಸ್ತೆಗಳ ಸ್ತಿತಿ-ಗತಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯರವರು ನಗರದಲ್ಲಿ ಈಗಾಗಲೇ 1500 ರಸ್ತೆ ಗುಂಡಿಗಳನ್ನು ಗುರುತು ಮಾಡಿದ್ದಾರೆ. ಒಂದು ತಿಂಗಳು ಗಟಡುವು ನೀಡಿದ್ದು ತಿಂಗಳೊಳಗೆ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.ಡಿಸಿಎಂ ಅವರು ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಎಷ್ಟು ಗುಂಡಿಗಳು ಇವೆ ಅದರ ರಿಪೋರ್ಟ್ ಕೊಡಿ ಎಂದು ಕೇಳಿದ್ದು,ಅವರು ನೀಡಿದ ರಿಪೋರ್ಟ್ ಆಧಾರದ ಮೇಲೆ ಇಷ್ಟು ಗುಂಡಿ ನಗರದಲ್ಲಿ ಇವೆ ಎಂದು ವರದಿ ನೀಡಿದ್ದಾರೆ. ವಾಹನ ಸವಾರರಿಗೆ ತೊಂದರೆ ಆಗದಂತೆ ಮಳೆಗಾಲ ಆರಂಭಕ್ಕೂ ಮುನ್ನವೇ ಗುಂಡಿ ಮುಚ್ಚುವ ಕೆಲಸ ಮಾಡಿ ಎಂದು ಹೇಳಿದ್ದೇವೆ. ಆದರೆ GBA. BDA. BWSSB.BMRC. ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ ಮತ್ತು ವಾರಕ್ಕೊಮ್ಮೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ಮಾಡಿ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಎಂದು ಪರಿಶೀಳಿಸಬೇಕು. ರಸ್ತೆಯ ಗುಣಮಟ್ಟ ಸರಿಯಾಗಿ ಇಲ್ಲದಿದ್ದರೇ ಅದಕ್ಕಡೆ ನೇರ ಹೊಣೆಗಾರಿ ಇಂಜಿನಿಯರ್ಗಳೇ ಕಾರಣರಾಗುತ್ತಾರೆ. ಇನ್ನು ರಸದ್ತೆ ನಿರ್ಮಾನ ಕಾರ್ಯಕ್ಕೆ ಹಣಕಾಸು ಇಲಾಖೆಗೆ ಕೂಡಲೇ 750 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದೇನೆ.ಮುಂದಿನ ತಿಂಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ಸೇರಿ ರಸ್ತೆಯ ಪ್ರಗತಿ ಕಾರ್ಯದ ಬಗ್ಗೆ ಚರ್ಚಿಸಲಿದ್ದೇವೆ. ಈಗಾಗಲೇ ಒಂದು ತಿಒಂಗಳು ಸಮಯಾವಕಾಶ ನೀಡಿದ್ದೇನೆ ಅಷ್ಟರೊಳಗೆ ಕಾಮಗಾರಿ ಮುಗಿಯದಿದ್ದಲ್ಲಿ ಅಧಿಕಾರಿಗಳೇ ನೇರ ಹೊಣೆಗಾರಿಕೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
