ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಶುರು ಮಾಡಿದ ಮೊದಲಿಗೆ ದೇಶದ ಜನರಿಗೆ ದೇಶದ ಜನರಿಗೆ ನವರಾತ್ರಿ ಹಬ್ಬದ ಶುಭಾಶಯಗಳು ತಿಳಿಸಿದರು. ನಾಳೆ ನವರಾತ್ರಿ ಹಬ್ಬದ ಮೊದಲ ದಿನ ಆರಂಭವಾಗಲಿದ್ದು, ನವರಾತ್ರಿ ಮೊದಲ ದಿನದಿಂದ ಜಿಎಸ್ಟಿ ಉತ್ಸವ ಆರಂಭವಾಗಲಿದೆ. ಜಿಎಸ್ಟಿಯಿಂದ ನಿಮ್ಮೆಲ್ಲರ ಉಳಿತಾಯ ಶುರುವಾಗಲಿದೆ. ಎಲ್ಲ ವರ್ಗದ ಜನರಿಗೂ ಉಳಿತಾಯದ ಉತ್ಸವ ಪ್ರಾರಂಭವಾಗಲಿದೆ ಎಂದರು.
GST ಸುಧಾರಣೆಯಿಂದ ದೇಶದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ತುಂಬಲಿದೆ. 2017ರಲ್ಲಿ ಭಾರತದಲ್ಲಿ ಜಿಎಸ್ಟಿ ಸುಧಾರಣೆ ಆರಂಭಿಸಲಾಗಿತ್ತು. ದಶಕಗಳಿಂದ ಜನ ಬೇರೆ ಬೇರೆ ರೀತಿಯ ತೆರಿಗೆಯಿಂದ ಬಳಲುತ್ತಿದ್ದರು. ಪ್ರತಿಯೊಂದು ಜಾಗದಲ್ಲಿ ವಿವಿಧ ರೀತಿಯ ತೆರಿಗೆ ಜಾರಿಯಲ್ಲಿತ್ತು. ಇದರಿಂದ ಬೆಂಗಳೂರು-ಹೈದರಾಬಾದ್ಗೆ ಉತ್ಪನ್ನ ಕಳಿಸಲು ಕಷ್ಟವಾಗುತ್ತಿತ್ತು. ತೆರಿಗೆ ಮತ್ತು ಟೋಲ್ನಿಂದ ಜನರಿಗೆ ಬಹಳ ತೊಂದರೆ ಆಗಿತ್ತು. ದೇಶದ ಜನರು ವಿವಿಧ ರೀತಿಯ ತೆರಿಗೆ ಜಾಲದಲ್ಲಿ ಸಿಲುಕಿದ್ದರು. ನಾಳೆಯಿಂದ ಪ್ರತಿ ಮನೆಯಲ್ಲೂ ಖುಷಿ ಹೆಚ್ಚುತ್ತದೆ ಎಂದರು.‘ಒನ್ ನೇಷನ್, ಒನ್ ಟ್ಯಾಕ್ಸ್’ ಕನಸು ಈಡೇರಿದೆ. ಸಮಯ ಬದಲಾದಂತೆ ದೇಶದ ಅಗತ್ಯತೆ ಸಹ ಬದಲಾಗುತ್ತದೆ. ದೇಶದ ಭವಿಷ್ಯದ ದೃಷ್ಟಿಯಿಂದ ಜಿಎಸ್ಟಿಯಲ್ಲಿ ಸುಧಾರಣೆ ಮಾಡಲಾಗಿದ್ದು, ಇದು ಹೊಸ ಪೀಳಿಗೆಗೆ ಸಹಕಾರಿಯಾಗಲಿದೆ. ಮಧ್ಯಮ ವರ್ಗದವರಿಗೆ ಸಹಕಾರ ಆಗಲಿದೆ. ರಾಜ್ಯದ ಅಭಿವೃದ್ಧಿಗೆ ಸಹಕಾರವಾಗಲಿದೆ. ಜಿಎಸ್ಟಿ ಯಿಂದ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ನಾಳೆಯಿಂದ ಜಾರಿಗೆ ತರಲಾಗುವುದು. ಇದರಿಂದ ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳು ಭಾರತದ ಬೆಳವಣಿಗೆಯ ವೇಗಗೊಳಿಸುತ್ತವೆ’ ಎಂದು ಜಿಎಸ್ಟಿ ಸುಧಾರಣೆಯನ್ನ ಪ್ರಧಾನಿ ಮೋದಿ ಶ್ಲಾಘಸಿದರು.ಜಿಎಸ್ಟಿ ಸುಧಾರಣೆ ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲಾ ಭಾರತೀಯರಿಗೆ ವ್ಯವಹಾರವನ್ನ ಸುಲಭಗೊಳಿಸುತ್ತದೆ. ಹೂಡಿಕೆಗಳನ್ನು ಆಕರ್ಷಕವಾಗಿಸಲಿದೆ. ಕಳೆದ 11 ವರ್ಷಗಳಲ್ಲಿ ತಮ್ಮ ಸರ್ಕಾರದ ಅಡಿಯಲ್ಲಿ ಸುಮಾರು 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ ಎಂದರು.
ದೇಶದ ಜನರಿಗೆ ಉಳಿತಾಯ ಹಬ್ಬ: ಮೋದಿ
ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿರುವ ಹೊಸ ಜಿಎಸ್ಟಿ ತೆರಿಗೆ ವ್ಯವಸ್ಥೆಯು ದೇಶದ ಜನರಿಗೆ ಸಂತೋಷ ತರಲಿದೆ. ಒಂದು ರಾಷ್ಟ್ರ ಒಂದು ತೆರಿಗೆ ಆಶಯವು ಜಿಎಸ್ಟಿಯಿಂದ ಸಾಕಾರಗೊಂಡಿದೆ. ಪ್ರತೀ ಕುಟುಂಬಕ್ಕೂ ಜಿಎಸ್ಟಿ ಸುಧಾರಣೆ ಒಳಿತು ಮಾಡಲಿದೆ. ಭಾರತದ ಪ್ರಗತಿಯನ್ನು ಹೆಚ್ಚಿಸಲಿದೆ ಎಂದು ನರೇಂದ್ರ ಮೋದಿ ಹೇಳಿದರು. ಆದಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಜಿಎಸ್ಟಿಯಿಂದ ಸಾಕಷ್ಟು ತೆರಿಗೆ ಕಡಿಮೆ ಆಗಿದೆ. ಇದರಿಂದ ಜನರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ನಾಳೆಯಿಂದ (ಸೆ. 22) ದೇಶದ ಜನರಿಗೆ ಉಳಿತಾಯದ ಉತ್ಸವವಾಗಲಿದೆ. ಪ್ರತಿಯೊಬ್ಬರಿಗೂ ಜಿಎಸ್ಟಿ ಮತ್ತು ಆದಾಯ ತೆರಿಗೆ ಇಳಿಕೆಯಿಂದ ಒಂದು ವರ್ಷದಲ್ಲಿ 2.5 ಲಕ್ಷ ರೂ ಉಳಿತಾಯವಾಗಲಿದೆ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟರು.
