ಬೆಂಗಳೂರು: ಹಲವಾರು ಗೊಂದಲಗಳ ನಡುವೆ ಇಂದಿನಿಂದ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ. ಹಲವಾರು ಸವಾಲುಗಳ ನಡುವೆ ಸಮೀಕ್ಷೆಗೆ ಕೈ ಹಾಕಿರುವ ರಾಜ್ಯ ಸರ್ಕಾರ ಸುಮಾರು 2 ಲಕ್ಷಕ್ಕೂ ಅಧಿಕ ಸಿಬ್ಬಂಧಿಯನ್ನೊಳಗೊಂಡು ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದೆ. ಸುಮಾರು 16 ದಿನಗಳ ಕಾಲ ನಡೆಯಲಿರುವ ಸಮೀಕ್ಷೆಯಲ್ಲಿ ರಾಜ್ಯದ 7 ಕೋಟಿ ಜನರರಿಂದ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಗುರಿ ಹೊಂದಿದೆ.
1528 ಜಾತಿಗಳ ಮಾಹಿತಿ ಸಂಗ್ರಹಕ್ಕೆ ಇಂದು ಚಾಲನೆ
ಸಿಬ್ಬಂದಿ ಕೊರತೆ ಹಿನ್ನೆಲೆ ಬೆಂಗಳೂರಿನಲ್ಲಿ 2-3 ದಿನಗಳ ಬಳಿಕೆ ಸಮೀಕ್ಷೆ ಆರಂಭವಾಗಿದ್ದು,ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವುದಲ್ಲದೇ online ನಲ್ಲೂ ಮಾಹಿತಿ ಒದಗಿಸುವ ಅವಕಾಶವನ್ನು ನೀಡಿದ್ದಾರೆ. ಇನ್ನು ಸಮೀಕ್ಷೆಯಲ್ಲಿ ವ್ಯಕ್ತಿಯ ವಿದ್ಯಾರ್ಹತೆ, ವಯಸ್ಸು, ಧರ್ಮ, ಜಾತಿ, ಉಪಜಾತಿ, ವೈವಾಹಿಕ ಸ್ಥಿತಿ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯತೆ, ಸ್ಥಿರಾಸ್ತಿ-ಚರಾಸ್ಥಿಗಳ ವಿವರ, ಆರೋಗ್ಯ ಸೇವೆ, ಅಪೌಷ್ಟಿಕತೆ, ಸಾಲದ ವಿವರ, ಸರ್ಕಾರದಿಂದ ಸಬ್ಸಿಡಿ ಸಿಗಲಿದೆಯೇ ಎಂಬ ಮಾಹಿತಿ ಜೊತೆಗೆ , ಮೂಲಸೌಕರ್ಯಗಳಾದ ಸ್ವಂತ ಮನೆ, ಅಡುಗೆ ಇಂಧನ ಬಗ್ಗೆ ಶೌಚಾಲಯ ಸೇರಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ.ಸಮೀಕ್ಷೆಯಲ್ಲಿ ಆಧಾರ್, ಪಡಿತರ ಚೀಟಿ, ಮತದಾರ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ
