ನವರಾತ್ರಿ ಶುಭ ದಿನದ ಪ್ರಯುಕ್ತ ರಿಷಭ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಕಾಂತಾರ: ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾಗಿದೆ.ಅಕ್ಟೋಬರ್ 2 ರಂದು ಬಿಡುಗಡೆ ಯಾಗಲಿರುವ ಕಾಂತಾರ ಚಿತ್ರದ ಪ್ರೀಕ್ವೆಲ್ನ 2ನಿಮಿಷ 56 ಸೆಕೆಂಡ್ಗಳ ಹೊಸ ಟ್ರೈಲರ್ ಒಂದು ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಅಜನೀಶ್ ರವರ ಹಿನ್ನಲೆ ಸಂಗೀತ ನೀಡಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಮಲಯಾಳಂ ನಟ ಜಯರಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಾಂತಾರ ಚಾಪ್ಟರ್ ೧ ಅದ್ದೂರಿಯಾಗಿ ನಿರ್ಮಾಣವಾಗಿದ್ದು ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ . ದೈವ- ಭೂತಾರಾಧನೆ ಪೌರಾಣಿಕ ಕಥೆಗಳು, ಹಳ್ಳಿ ಸೊಗಡು, ಹಬ್ಬ,ನಂಬಿಕೆ ಮತತು ಯೋಧರ ಸಾಹಸ ಘಟನೆಗಳನ್ನು ಒಳಗೊಂಡಿದೆ. ಚಿತ್ರದಲ್ಲಿ ರಿಷಭ್ ಶೆಟ್ಟಿ ಬೆರ್ಮೆ ಹೆಸರಿನ ಶಿವನ ರೂಪವಾಗಿದ್ದು, ಹಳ್ಳಿಯ ಜನ ಜೀವನ, ಪರಂಪರೆ ಮತ್ತು ದೈವ ದೇವತಗಳ ಜೊತೆಗೆ ಸಂಬಂಧ ಹೊಂದಿರುವ ಸಾಹಸ ಕಥೆಯಾಗಿದೆ.ಟ್ರೈಲರ್ನಲ್ಲಿ ಹಳ್ಳಿಯ ಸೊಗಡು, ಆಚರಣೆಗಳು, ನಂಬಿಕೆ ಮತ್ತು ಮಾಯಾಜಾಲಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಚಿತ್ರವು ಕನ್ನಡ ಸೇರಿದಮತೆ 8 ಭಾಷೆಗಳಲ್ಲಿ ಬಿಡುಗಡೆಯಾಗಿದೆ ಮತ್ತು ಭಾರತೀಯ ಚಿತ್ರರಂಗದಲ್ಲೇ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದೆ.ಕಾಂತಾರ: ದ ಲೆಜೆಂಡ್ ಅಧ್ಯಾಯ ೧ ದಸರಾ ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ಅ.2ರಂದು ಸಿನೆಮಾ ಬಿಡುಗಡೆ ಮಾಡಲಾಗುತ್ತಿದೆ.
