ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಸಂಸದ ಮತ್ತು ಹಾಲಿ ಅಧ್ಯಕ್ಷ ಡಾ.ಕೆ. ಸುಧಾಕರ್ ಪತ್ನಿ ಡಾ.ಪ್ರೀತಿ ಸುಧಾಕರ್ಗೆ ಸೈಬರ್ ವಂಚನೆ.ಆಗಸ್ಟ್ 26ರಂದು ಡಾ.ಪ್ರೀತಿಯವರಿಗೆ ಬೆಳಿಗ್ಗೆ 9:30ಕ್ಕೆ ಮುಂಬೈ ಸೈಬರ್ ಡಿಪಾರ್ಟ್ಮೆಂಟ್ನಿಂದ ಮಾತನಾಡುತ್ತಿದ್ದೇವೆ ನಿಮ್ಮ ದಾಖಲೆಗಳನ್ನು ಸದ್ಭತ್ ಖಾನ್ ಎಂಬ ಅಪರಿಚಿತ ವ್ಯಕ್ತಿ ಬಳಸಿಕೊಳ್ಳುತ್ತಿದ್ದಾನೆ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ನ್ನು ನಕಲಿಸಿ ಇಲ್ಲೀಗಲ್ ಟ್ರಾನ್ಸಾಕ್ಷನ್ ಮಾಡುತ್ತಿದ್ದಾನೆ. ಅಲ್ಲದೆ ವಿದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಲು ಜನರನ್ನು ಬಳಸಿಕೊಳ್ಳುತ್ತಿದ್ದಾನೆ . ಇದರ ವಿಚಾರಣೆಯಾಗಿ ನಿಮಗೆ ವಿಡಿಯೋ ಕಾಲ್ ಮಾಡಿದ್ದೇವೆ, ನಿಮ್ಮ ವೈಕ್ತಿಕ ದಾಖಲೆಗಳ ಪರಿಶೀಲನೆ ಮಾಡಬೇಕು, ನಿಮ್ಮ ಬ್ಯಾಂಕ್ ಅಕೌಂಟ್ ಇಲ್ಲೀಗಲ್ ಆಗಿದ್ದು ಆರ್ಬಿಐ ರೂಲ್ಸ್ ಪರಿಶೀಲನೆ ಮಾಡುವುದಾಗಿ 14 ಲಕ್ಷ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ. ಇನ್ನು ಪ್ರೀತಿ ಸುಧಾಕರ್ ಅವರಿಂದ 14ಲಕ್ಷ ಹಣ ಆರ್ಟಿಜಿಎಸ್ ಮಾಡಿಸಿಕೊಂಡು ವಂಚನೆ ಮಾಡಿರುವುದು ಪತ್ತೆಯಾಗಿದೆ . ಇನ್ನು ಈ ವಿಚಾರವಾಗಿ ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ಧಾರೆ.
