ಕೊಪ್ಪಳ : ರೈತರನ್ನು ಸರ್ಕಾರಿ ಆಡಳಿತದ (ಕೊಪ್ಪಳ ಜಿಲಾಧಿಕಾರಿಗಳು, ಸಹಾಯಕ ಆಯುಕ್ತರು, ಉಪ ಆಯುಕ್ತರು, ತಹಶೀಲ್ದಾರ್. ಕೊಪ್ಪಳ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು), ಬೆಂಬಲದೊಂದಿಗೆ ಶೋಷಿಸುವ ‘ರಿನ್ಯೂಪವರ್’ ಕಂಪನಿಯು ಯಾವುದೇ ಪಾರದರ್ಶಕತೆ ಇಲ್ಲದೆ 19 ಹಳ್ಳಿಗಳ ಮೂಲಕ ಹಾದು ಹೋಗುವ ISTS ಮಾರ್ಗ ರಿನ್ಯೂಪವರ್ ಮತ್ತು ಅದರ ಉಪ ಕಂಪನಿಗಳಿಂದ ಮತ್ತು ಅವುಗಳ ಹೆಸರಿನಲ್ಲಿ ನಕಲಿ ಸರ್ಕಾರಿ ಕಡತಗಳನ್ನು ಸೃಷ್ಟಿಸಿ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಅರುಣ್ ಎಸ್. ಹಿರೇಹಾಳ್ ಆರೋಪಿಸಿದ್ದಾರೆ.
ರಿನ್ಯೂ ಪವರ್ ಎಂಬ ವಿಂಡ್ ಪವರ್ ಕಂಪನಿ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ ತಾಲೂಕಿನ ಕೆಲವು ಗ್ರಾಮಗಳ ರೈತರ ಜಮೀನಿನಲ್ಲಿರುವ ಬೆಲೆ ಬಾಳುವ ಮರಗಳನ್ನು ನಾಶ ಮಾಡಿ ನಕಲಿ ಕಡತ ಸೃಷ್ಟಿಸಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಈ ಕುರಿತು ದೂರು ನೀಡಿದರು ಪೊಲೀಸರು ಮೌನವಹಿಸಿದ್ದು, ಜಿಲ್ಲಾಡಳಿತದ ಅಧಿಕಾರಿಗಳು ಕೂಡಾ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ರೈತರಾದ ಅರುಣ ಹಿರಿಯಾಳ್, ಜೊತೆಗೆ ಮುಖಂಡ ಟಿ.ರತ್ನಾಕರ್ ಆರೋಪಿಸಿದ್ದಾರೆ. ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ರೈತರನ್ನು ಜಿಲ್ಲಾಡಳಿತ ಮತ್ತು ಕಂಪನಿಯು ದಾರಿ ತಪ್ಪಿಸಲಾಗುತ್ತಿದೆ. ಇದಕ್ಕೆ ಉದಾಹರಣೆ ಪರಿಶಿಷ್ಟ ಪಂಗಡದ (ಸರ್ವೇ ನಂ. 32/2 ಶಾಡೆಲ್ಲೇರಿ ಗ್ರಾಮದಲ್ಲಿ ಪರಿಸಿಷ್ಟ ಪಂಗಡದ ಭೂಮಾಲೀಕರ ಜಮೀನಿನಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅನುಮತಿಯಿಲ್ಲದೆ 35 ಮರಗಳನ್ನು ಕಡಿದುಹಾಕಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ ಮತ್ತು ಕಂಪನಿಗೆ ಎಲ್ಲಾ ರಕ್ಷಣೆ ಸಿಗುತ್ತಿದೆ.
ಲೋಕಾಯುಕ್ತ ಮತ್ತು NCST ಗೆ ದೂರು ನೀಡಲಾಗಿದೆ. ಈ ಬಗ್ಗೆ ಕೊಪ್ಪಳ ಜಿಲ್ಲೆಯಲ್ಲಿ ನಿಯಮ ಬಾಹಿರ ನೆಡೆಯುತ್ತಿರುವ ಅಕ್ರಮ ಕಾಮಗಾರಿ, ದುರಾಡಳಿತ ಅಂಧ ದರ್ಬಾರ್ ಕುರಿತು ಎಲ್ಲಾ ದಾಖಲೆ ಸಹಿತ ಖಾಸಗಿ ಕಂಪನಿಗಳ ಕರ್ಮಕಾಂಡ ಬಯಲು ಮಾಡುತ್ತಿದೆ. ರಿನ್ಯೂ ಪವರ್ ಕಂಪನಿ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ನಕಲಿ ಸಹಿಯೊಂದಿಗೆ ಕೆಲವು ಪತ್ರಗಳನ್ನು ತಯಾರಿಸಿ ಅರಣ್ಯ ಇಲಾಖೆ ಅನುಮತಿ ಪಡೆಯದೇ ರೈತರ ಜಮೀನಿನಲ್ಲಿರುವ ಬೆಲೆ ಬಾಳುವ ಟೀಕ್ ಮರಗಳನ್ನು ಕಡಿದು ಹಾಕಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ಕಂಪನಿ ರೈತರ ಜಮೀನಿನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ 19 ಹಳ್ಳಿಗಳ ರೈತರ ಜಮೀನಿನಲ್ಲಿ ಎಸ್ಟಿಎಸ್ ಮಾರ್ಗವನ್ನು’ರಿನ್ಯೂ ಪವರ್ ಕಂಪನಿ’ ಅದರ ಉಪ ಕಂಪನಿಗಳಿಂದ ವಿಂಡ್ ಪವರ್ ಜೋಡಿಸುತ್ತಿದೆ.
ಅಧಿಕಾರಿಗಳಿಂದ ನಕಲಿ ದಾಖಲಾತಿ ಮಾಹಿತಿ
ಎಸ್ಸಿ.ಎಸ್ಟಿ ರೈತರ ಜಮೀನಿನಲ್ಲಿ ಬಂದು ದಬ್ಬಾಳಿಕೆ ಮಾಡುತ್ತಿದೆ. ಈ ಕುರಿತು ದೂರು ನೀಡಿದರೆ ಪೊಲೀಸರು, ಕಂದಾಯ, ಅರಣ್ಯ ಮತ್ತು ಜಿಲ್ಲಾಧಿಕಾರಿಗಳು ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಿಂದ ವರ್ಥಿಸುತ್ತಿದ್ದಾರೆ ಎಂದು. ಹಾಗೂ ಕೊಪ್ಪಳ ಸಹಾಯಕ ಆಯುಕ್ತರ ಹೆಸರಿನಲ್ಲಿ ನಕಲಿ ನಡವಳಿಕೆ ಸೃಷ್ಟಿಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಈ ಕುರಿತು ಈಗ ನಾವು ಲೋಕಾಯುಕ್ತ ಮತ್ತು ದೆಹಲಿ ಎನ್ಸಿಎಸ್ಟಿಗೆ ದೂರು ನೀಡಿದ್ದೇವೆ. ಹಿಂದೆ ಕರ್ತವ್ಯ ನಿರ್ವಹಿಸಿದ್ದ ಜಿಲ್ಲಾಧಿಕಾರಿಗಳು ಕಂಪನಿಯೊಂದಿಗೆ ಶ್ಯಾಮೀಲಾಗಿ ಜಿಲ್ಲಾಡಳಿತ ರೈತರ ಬೆಂಬಲಕ್ಕೆ ಬಾರದ ಕಾರಣ ಮಾಧ್ಯಮಗಳ ಮೂಲಕ ಕಂಪನಿ ಮಾಡುತ್ತಿರುವ ಅನ್ಯಾಯವನ್ನು ಬಹಿರಂಗಪಡಿಸಿದ್ದೇವೆ ಎಂದು ರೈತ ಆರೋಪಿಸಿದ್ದಾರೆ, ಈ ಸಂದರ್ಭದಲ್ಲಿ ರೈತರಾದ ಅರುಣ ಹಿರಿಯಾಳ್, ಮುಖಂಡ ಟಿ.ರತ್ನಾಕರ್ ರೈತ ಮುಖಂಡ ಶರಣಪ್ಪ ಗುಂಗಾಡಿ ಸೇರಿದಂತೆ ಮತ್ತಿತರು ಭಾಗಿಯಾಗಿದ್ದರು.
