ಬೆಂಗಳೂರು: ಫೇವರೆಜ್ ಮೆಗಾ ಫುಡ್ ಪಾರ್ಕ್ ಮತ್ತು ಕೆಆರ್ಇಡಿಎಲ್ ಕರ್ಮಕಾಂಡ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಬಣ್ಣಿನಲ್ಲಿ ಗ್ರಾಮದ ಬಳಿ ಸರ್ಕಾರಿ ಕಟ್ಟೆಯನ್ನು ಅನಧಿಕೃತವಾಗಿ ಮುಚ್ಚಿ ಹಾಗೂ ಸಾರ್ವಜನಿಕ ಜಿಲ್ಲಾ ಮುಖ್ಯ ರಸ್ತೆಯನ್ನು ಅತಿಕ್ರಮಿಸಿ ಸಾರ್ವಜನಿಕರಿಗೆ ಓಡಾಡಲು ಅಡ್ಡಲಾಗಿ ತಡೆಗೋಡೆಯನ್ನು ನಿರ್ಮಿಸಿರುವುದು. ಈ ಎಲ್ಲಾ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಷೇತ್ರ ಶಾಸಕರಾದ ಮಾನ್ಯ ಶ್ರೀ ಎಚ್ ಟಿ ಮಂಜು ರವರು ವಿಧಾನಸಭೆಯ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗಿತ್ತು ಅದಕ್ಕೆ ಸಂಬಂಧ ಕೆಐಎಡಿಬಿ ಮುಖ್ಯ ಇಂಜಿನಿಯರ್ ಮತ್ತು ತಂಡ ಹಾಗೂ ಬೆಂಗಳೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ದಾಗ ಅಲ್ಲಿನ ಗ್ರಾಮಸ್ಥರು ಹಾಗೂ ಶಾಸಕರು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಗೆ ಶಾಸಕರಾದ ಮಂಜು ಆಗಿರುವ ಅಕ್ರಮದ ಬಗ್ಗೆ ದಾಖಲಾತಿ ಮುಖಾಂತರ ಗ್ರಾಮಸ್ಥರ ಸಮ್ಮುಖದಲ್ಲಿ ಬಣ್ಣೆನಹಳ್ಳಿ ಗ್ರಾಮದ ಸರ್ವೆ ನಂಬರ್ 21 ರಲ್ಲಿ ಮೈಸೂರು ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಅಶೋಕನಗರದಿಂದ ಬಣ್ಣೇನಹಳ್ಳಿಗೆ ಹೋಗುವ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಲು ಸರ್ಕಾರ ದಿಂದ 4ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗ ರಸ್ತೆಯ ಸೇವಾ ರಸ್ತೆಯನ್ನು ಫೇವರಿಜ್ ಮೆಗಾ ಫುಡ್ ಫ್ಯಾಕ್ಟರಿ ಅವರು ಭಾಗಶಃ ಅತಿಕ್ರಮಿಸಿಕೊಂಡಿದ್ದಾರೆ ಜೊತೆಗೆ ಫ್ಯಾಕ್ಟರಿಯಿಂದ ಹೊರ ಬರುವ ಮಾಲಿನ್ಯ ತ್ಯಾಜ್ಯ ನೀರನ್ನು ಸಮೀಪದ ಕೆರೆ ಕಟ್ಟೆಗಳಿಗೆ ಹೊರಬಿಡಲಾಗುತ್ತಿದೆ. ಆದರೆ ಅದನ್ನು ನಿಲ್ಲಿಸುವ ಬದಲು ಸಾರ್ವಜನಿಕರ ರಸ್ತೆಯಾದಂತಹ ಸಾರ್ವಜನಿಕ ಮುಖ್ಯ ರಸ್ತೆಯನ್ನು ಅಡ್ಡಲಾಗಿ ತಡೆಗೋಡೆಯನ್ನು ಕಟ್ಟಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಬಣ್ಣೇನಹಳ್ಳಿ ಸರ್ವೆ ನಂಬರ್.21ನ 1.38 ಎಕರೆ ಸರ್ಕಾರಿ ಕಟ್ಟೆಯನ್ನು ಮುಚ್ಚಿ ಅವರ ಕಾಮಗಾರಿಯನ್ನು ಮುಂದುವರಿಸಿದ್ದಾರೆ. ಕೆರೆ ಕಟ್ಟೆಗಳನ್ನು ಯಾವುದೇ ಕಾರಣಕ್ಕೂ ನಾಶ ಮಾಡದಂತೆ ಹಲವಾರು ಬಾರಿ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಆದರೆ ಇವರು ಇಲ್ಲಿನ ಕಟ್ಟೆಯನ್ನು ಮುಚ್ಚಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ಅಧಿಕಾರಿಗಳು ಗ್ರಾಮಸ್ಥರಿಗೆ ಆಗಿರುವ ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸುತ್ತಾ ಶಾಸಕರ ಮುಂದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೂ ಮತ್ತು ಶಾಸಕರಿಗೂ ತೊಂದರೆಗಳನ್ನು ನಿವಾರಿಸುವ ಸಂಬಂಧ ಎಲ್ಲಾ ಇಲಾಖೆಗಳ ತಜ್ಞರನ್ನೊಳಗೊಂಡ ತಂಡದೊಂದಿಗೆ ಇನ್ನು ಎರಡು ವಾರಗಳದಲ್ಲಿ ಸಮಗ್ರ ತನಿಖೆ ಮಾಡಿ ಇಲ್ಲಿ ನಡೆದಿರುವ ಅನ್ಯಾಯಕ್ಕೆ ಪರಿಹಾರವನ್ನು ಖಂಡಿತ ಕೊಡುತ್ತೇವೆ ಮತ್ತು ಇಲ್ಲಿನ ತೊಂದರೆ ಕುರಿತು ಸರ್ಕಾರಕ್ಕೆ ವರದಿಯನ್ನು ತಲುಪಿಸುತ್ತೇವೆ ಎಂದು ತಿಳಿಸಿದರು.
