ವಿಜಯಪುರ: ವಿಜಯಪುರ ಜಿಲ್ಲೆಯ ಆಹಾರ ಸುರಕ್ಷತಾ ಕಚೇರಿಯಲ್ಲಿ ಶ್ರೀ ರಾಜೇಸಾಬ ಬಿರಾದಾರ ಎನ್ನುವ ಭ್ರಷ್ಟ ಅಧಿಕಾರಿಯೊಬ್ಬ ಇಡೀ ವಿಜಯಪುರ ಜಿಲ್ಲೆಯಲ್ಲಿರುವ ಬಹುತೇಕ ಹೋಟೆಲ್ ಮಾಲೀಕರನ್ನು ಹೆದರಿಸಿ – ಬೆದರಿಸಿ ನಿರಂತರವಾಗಿ ಸುಲಿಗೆ ಮಾಡುತ್ತಲೇ ಬಂದಿದ್ದಾನೆ. ಕಳೆದ 18ನೇ ತಾರೀಖಿನಂದು ನಾನು ಮತ್ತು ನಮ್ಮ ಗೆಳೆಯರ ಬಳಗ ಸೋಲಾಪುರ ರಸ್ತೆಯಲ್ಲಿ ಇರುವ ಶ್ರೀ ಸಾಯಿ ಕೃಷ್ಣ ಪ್ಯಾಲೇಸ್ ಹೋಟೆಲ್ನಲ್ಲಿ ಆಹಾರದಲ್ಲಿ ಬಂದ ಕಬ್ಬಿಣದ ಚೂರು ಸಿಕ್ಕಿದ್ದು ಅದರ ಬಗ್ಗೆ ದೂರು ನೀಡಿದಾಗ ಹೋಟೆಲ್ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಆದರೆ ಮರುದಿನ ಹೋಟೆಲ್ ಪ್ರಾರಂಭಕ್ಕೆ ಅನುಮತಿಯನ್ನೂ ನೀಡಿದ್ದಾರೆ.
ಈ ಅಧಿಕಾರಿಯ ಕೆಲಸವೇ ಇದಾಗಿದ್ದು ಕೇಸ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುವುದೇ ಈತನ ನಿರಂತರ ಕೆಲಸವಾಗಿದೆ. ಇವನ ವಂಚನೆ ಕೆಲಸಕ್ಕೆ ಜಿಲ್ಲಾಡಳಿತ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಎಂದು ಕಾದುನೋಡಬೇಕಾಗಿದೆ. ಸ್ವತಃ ತಾನು ಲಂಚ ಪಡೆಯುವಾಗ ಆನ್ಲೈನ್ ಪೇಮೆಂಟ್ ಮಾಡಿಸಿಕೊಳ್ಳಲು ನಾನು ದಡ್ಡನಲ್ಲ ಎಂದು ಅಧಿಕಾರಿಯು ತಿರುಗೇಟು ನೀಡಿದ್ದಾನೆ. ವಿಜಯಪುರ ನಗರದ ಸಂಘಟನೆಗಳು ಈ ಅಧಿಕಾರಿ ವಿರುದ್ಧ ಕಾನೂನು ರೀತಿಯಿಂದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
