ದೊಡ್ಡಬಳ್ಳಾಪುರ: ಬೆಳಗಾವಿಯಲ್ಲಿ ಹೋಟೆಲ್ ನಡೆಸಿಕೊಂದು ಜೀವನ ಸಾಗಿಸುತ್ತಿದ್ದರಘು ವಾರದ ಹಿಂದೆ ಹುಟ್ಟೂರಿಗೆ ಬಂದಿದ್ದ. ರಾತ್ರಿ ಸಮಯದಲ್ಲಿ ಸ್ನೇಹಿತನ ಜೊತೆ ಹೊರಗಡೆ ಹೋಗುವುದಾಗಿ ಹೇಳಿ ಹೊರಟವನು ಮಾರನೆ ದಿನ ಬೆಳಿಗ್ಗೆ ಶವವಾಗಿ ಪತ್ತೆ. ದೊಡ್ಡಬಳ್ಳಾಪುರ ನಗರದ ಹೊರವಲಯದ ಬಾಲಶೆಟ್ಟಿ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ರಘು (38) ಹತ್ಯೆಯಾದ ವ್ಯಕ್ತಿ.ಬಾಶೆಟ್ಟಿಹಳ್ಳಿಯ ಯಲಹಂಕ ರಸ್ತೆಯಲ್ಲಿ ಬುಲೆಟ್ ರಘುನನ್ನು ದುಶ್ಕರ್ಮಿಗಳು ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಸಾಧಿಕ್ ಪಾಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೊಲೆಯಾದ ಬುಲೆಟ್ ರಘು, ಈ ಹಿಂದೆ ಗಲಾಟೆ ಮಾಡಿಕೊಂಡು ನಂತರ ರಾಜಿ ಕೂಡಾ ಮಾಡಿಕೊಂಡಿದ್ದರು, ಏಳೆಂಟು ವರ್ಷಗಳ ಹಿಂದೆ ಬೆಳೆಗಾವಿಯಲ್ಲಿ ಹೊಟೇಲ್ ವ್ಯವಹಾರ ಮಾಡುತ್ತಿದ್ದ, ಅಲ್ಲಿಯ ಹುಡುಗಿಯನ್ನ ಪ್ರೀತಿಸಿ ಮದುವೆಯಾಗಿ ಜೀವನ ನಡೆಸುತ್ತಿದ್ದನು. ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ ಆತ, ಕಳೆದ ರಾತ್ರಿ ಸ್ನೇಹಿತರ ಜೊತೆ ಹೋಗುವುದಾಗಿ ತನ್ನ ತಾಯಿಗೆ ಹೇಳಿ ಹೋದವನು, ಆತನ ಜೊತೆ ಬಂದಿದ್ದ ಸ್ನೇಹಿತರು ಮದ್ಯದ ಗಲಾಟೆ ಮಾಡಿ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ . ತನ್ನ ಸ್ನೇಹಿತನೇ ಈ ಕೊಲೆ ಮಾಡೀರುವುದಾಗಿ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪ್ರಕರಣ ಸಂಬಂಧ ತನಿಖೆಯನ್ನು ಕೈಗೊಂಡಿದ್ದಾರೆ.
