ಬಾಗಲಕೋಟೆ : ಆಸ್ತಿ ವಿಚಾರವಾಗಿ ನಡೆದ ಕೌಟುಂಬಿಕ ಕಲಹದಲ್ಲಿ ಬಿರುಕು ಮೂಡಿದ್ದು, ಕಲಹದಲ್ಲಿ ಹೆಂಡತಿಯ ತವರು ಮನೆಯವರಿಂದ ಪತಿಗೆ ಹಲ್ಲೆ ಮಾಡಿದ್ದಾರೆ. ಕಲಹದಲ್ಲಿ ಹಲ್ಲೆಗೆ ಒಳಗಾದವನ ಎರಡೂ ಕೈ- ಕಾಲು ಮುರಿದುಕೊಂಡ ವ್ಯಕ್ತಿಯು ತನಗೆ ನ್ಯಾಯ ಬೇಕೆಂದು ಆ್ಯಂಬುಲೆನ್ಸ್ ನಲ್ಲಿ ನಗರದ ಎಸ್.ಪಿ ಕಚೇರಿಗೆ ಬಂದ ಘಟನೆ ನಡೆದಿದೆ
ಬೀಳಗಿ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಕಲ್ಮೇಶ ಜೋಗಿ ಎನ್ಜುವ ವ್ಯಕ್ತಿಯೇ ಹಲ್ಲೆಗೆ ಒಳಗಾದ ವ್ಯಕ್ತಿ. ತನ್ನ ಹೆಂಡತಿ ಮಹಾದೇವಿ ,ತನ್ನ ತಮ್ಮ ಶಂಕರ ಜಿಡ್ಡಿಮನಿ ಕಡೆಯಿಂದ ಹಲ್ಲೆ ಮಾಡಿಸಿದ್ದಾಳೆಂದು ಅರೋಪಿಸಿದ್ದಾನೆ. ೪ ಎಕರೆ ಆಸ್ತಿಗಾಗಿ ಹೆಂಡತಿಯು ತವರು ಮನೆಯವರನ್ನು ಕರೆಸಿ ಹೊಡೆಸುವುದು ಮಾಡುತ್ತಿದ್ದಾರೆಂದು ಆರೋಪ ಕೇಳಿ ಬಂದಿದೆ.ತಾವು ಹೇಳಿದಲ್ಲಿ ಸಹಿ ಮಾಡುವಂತೆ ಒತ್ತಡ ಹೇರಿದ ಹಿನ್ನೆಲೆ ಗಲಾಟೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕಳೆದ ಸೆ.4 ರಂದು ಘಟನೆ ನಡೆದಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಕಲ್ಮೇಶ ಈಗ ಪ್ರಜ್ಞೆ ಬಂದ ಬಳಿಕ ಎಸ್ . ಪಿ. ಅವರ ಬಳಿ ನ್ಯಾಯ ಕೇಳಲು ಬಂದಿದ್ದಾಗಿ ಗಾಯಾಳುವಿನ ಸಹೋದರಿ ಯಮುನಾಬಾಯಿ ಹೇಳಿದ್ದಾರೆ. ಕೇವಲ ಕಲ್ಮೇಶನ ಹೆಂಡತಿ ಮಹದೇವಿಯ ತಮ್ಮ ಮಾತ್ರ ಹಲ್ಲೆ ಮಾಡಿಲ್ಲ ಅವರ ಸಂಬಂಧಿಕರೂ ಹಲ್ಲೆ ಮಾಡಿದ್ದಾರೆ. ಮಹದೇವಿ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಹಿಸಬೇಕೆಂದು ಎಸ್ . ಪಿ. ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
