ರಾಯಚೂರು: ಕಳೆದ ಎರಡು ಮೂರು ದಿನಗಳಿಂದ ಬಿಟ್ಟು ಬಿಡದೆ ಸುರಯುತ್ತಿರುವ ವರುಣ, ವರುಣನ ಆರ್ಭಟಕ್ಕೆ ನಲುಗಿದ ರೈತ. ರಾಯಚೂರಿನ ಲಿಂಗಸಗೂರು ತಾಲ್ಲೂಕಿನ ಈಚನಾಳ ಗ್ರಾಮದ ರೈತನೊಬ್ಬನು ತಾನು ಬೆಳೆದಿದ್ದ 3 ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆಯುಉತ್ತಮ ಫಸಲು ನೀಡುವ ಸಮಯದಲ್ಲಿ ಹೂ ಬಿಡುವ ಸಮಯದಲ್ಲಿ ವರುಣನ ಅವಾಂತರದಿಂದ ಮೊಣಕಾಲುದ್ದ ನೀರು ನಿಂತು ಜಮೀನಿನಲ್ಲಿ ಬೆಳೆದ ಬೆಳೆ ಸಂಫೂರ್ಣ ಹಾಳಾಗಿದ್ದು, ರೈತ ಕಂಗಾಲಾಗಿದ್ದಾನೆ. ಸದ್ಯ ಸ್ಥಳಕ್ಕೆ ಬಾರದ ಅಧಿಕಾರಿಗಳು ರೈತನ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತನು ಆಕ್ರೋಶ ವ್ಯಕ್ತಪಡಿಸಿದ್ದಾನೆ.
