ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನ ವಾದ) ಕಾರ್ಯಕರ್ತರು ಮಹದೇವಪುರ ಕ್ಷೇತ್ರದ ಶೀಗೆಹಳ್ಳಿಯಲ್ಲಿ ಬೌದ್ದ ಧರ್ಮ ದಾಖಲಾತಿ ಆಂದೋಲನ ನಡೆಸಿದರು.ಜಾತಿ ಸಮೀಕ್ಷೆ ನಡೆಯುತಿರುವ ಸಮಯದಲ್ಲಿ ಹಲವಾರು ಗೊಂದಲಗಳ ನಡುವೆ ಚುರುಕೊಗೊಂಡಿರುವ ಸಮೀಕ್ಷೆಯ ಪಟ್ಟಿಯಲ್ಲಿ ಬೌದ್ಧ ಧರ್ಮ ಮತವನ್ನು ಸೇರಿಸುವಂತೆ ಒತ್ತಾಯಿಸಿ ಹಲವು ಕಡೆ ಪ್ರತಿಭಟನೆ ನಡೆಸಿದರು. ಅಲ್ಲದೆ ಮನೆಮನೆಗೆ ಬುದ್ಧ ಎಂಬ ಘೋಷಣೆಯೊಂದಿಗೆ ದಾಖಲಾತಿ ಆಂದೋಲನವನ್ನು ಯೋಜಿಸಿ ಈ ಆಂದೋಲನಕ್ಕೆ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ರಾಜ್ಯ ಸಂಘಟನಾ ಸಂಚಾಲಕ ಎಂ.ಆರ್.ವೆಂಕಟೇಶ್ ನೇತೃತ್ವದಲ್ಲಿ ಬೆಂ. ಪೂರ್ವ ತಾಲ್ಲೂಕು ಸಮಿತಿ ವತಿಯಿಂದ ಮನೆಮನೆಗೆ ಬುದ್ದ ಎನ್ನುವ ಘೋಷವಾಕ್ಯದೊಂದಿಗೆ ನಡೆದ ದಾಖಲಾತಿ ಆಂದೋಲನವು ಜನಗಣತಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಸಂಚಾಲಕ ಮಹೇಂದ್ರಕುಮಾರ್, ಪೂ.ತಾ. ಸಂಚಾಲಕ ನಾಗರಾಜ್, ಬೆಂ.ಪೂ.ತಾ ಅಧ್ಯಕ್ಷ ರವಿಕುಮಾರ್, ಮುಖಂಡರಾದ ನಲ್ಲೂರಹಳ್ಳಿ ಶಿವಣ್ಣ, ಕಾನೂನು ಸಲಹೆಗಾರ ವಿಜಯನ್, ರಾಮಕೃಷ್ಣ, ಬಿ.ಆರ್.ವೆಂಕಟೇಶ್, ದಿನ್ನೂರು ಮುನಿವೆಂಕಟಮ್ಮ, ಹಜೀರಾಪಾರು, ಪೊಲ್ಲಪ್ಪ, ಮುನಿಯಪ್ಪ ಮತ್ತಿತರರು ಆಂದೋಲನದಲ್ಲಿ ಭಾಗಿಯಾಗಿದ್ದರು
