ಚಳ್ಳಕೆರೆ : ಅರಣ್ಯ ಸಚಿವರು ನೋಡಲೇ ಬೇಕಾದ ಸ್ಟೋರಿ, ನೋಡಿ ಪರಿಸರದ ಅಂದ ಮರ-ಗಿಡಗಳಿಂದ ತುಂಬಿ ಕಂಗೊಳಿಸಬೇಕು ಆದರೆ, ಕಾಲೇಜಿನ ಅಂದ ಹೆಚ್ಚಿಸೋದಕ್ಕಾಗಿ , ಪ್ರತಿಷ್ಠೆಯನ್ನು ಹೆಚ್ಚಿಸೋದಕ್ಕಾಗಿ ಕಾಲೇಜಿನ ಆವರಣದಲ್ಲಿರುವ 100ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಿದ್ದಾರೆ.ಕಾಲೇಜಿನ ಅಂದಕ್ಕಾಗಿ ಮರಗಳನ್ನು ನಾಶಗೊಳಿಸದರಾ !
ಅಭಿವೃದ್ಧಿ ಹೆಸರಿನಲ್ಲಿ ನಾಶಮಾಡುವುದೇ ಹೆಚ್ಚಾಗಿದೆ , ಅಭಿವೃದ್ಧಿ ಎಂದರೆ ಇದೇನಾ ಪರಿಸರ ಸಂರಕ್ಷಣೆ ಅಂದರೆ ಇದೆನ ?ಚಳ್ಳಕೆರೆ ನಗರದ ಹೆಚ್ಪಿಪಿಸಿ ಸರ್ಕಾರಿ ಕಾಲೇಜಿನ ಆವರಣದಲ್ಲಿ ಸುಮಾರು ವರ್ಷಗಳಿಂದ ಅನೇಕ ವಿದ್ಯಾರ್ಥಿಗಳ ಪರಿಶ್ರಮದಲ್ಲಿ ಬೆಳೆಸಿದ ಬೇವು, ಆಲ, ಹೊಂಗೆ,ಅರಳಿ, ಸಿಗರಿ ಸೇರಿದಂತೆ ಅನೇಕ ತಳಿಯ 100ಕ್ಕೂ ಹೆಚ್ಚು ಕಾಡು ಜಾತಿಯ ಮರಗಳನ್ನು ಕೆಲವೇ ಕ್ಷಣಗಳಲ್ಲಿ ಕಡಿದು ಹಾಕಿದ್ದಾರೆ. ಇನ್ನು ಇಷ್ಟೆಲ್ಲ ನಡೆದರೂ ಅರಣ್ಯಾಧೀಕಾರಿಗಳು ಏನು ಮಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಿದ್ದಾರೆ.ಈ ಕುರಿತಂತೆ ಕರ್ನಾಟಕ್ ರಕ್ಷಣಾ ವೇದಿಕೆ ಪ್ರತಿಭಟನೆಗೆ ಮುಂದಾಗಿದ್ದು ದುಷ್ಕೃತ್ಯವೆಸಗಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ಮಾಡಿದ್ದಾರೆ.
