ಬಾಗಲಕೋಟೆ : ಎಲ್ಲಿ ನೋಡಿದರೂ ಗುಂಡಿಗಳ ಹಾವಳಿ ರಾಜ್ಯದ ನಾನ ಜಿಲ್ಲೆಗಳಲ್ಲಿ ಸರಿಹೋಗದ ರಸ್ತೆ ಸಮಸ್ಯೆ, ಸಾರ್ವಜನಿಕರು- ಸವಾರರು ಹೈರಾಣು. ಮಳೆ ಬಂದಂತಹ ಸಂದರ್ಭದಲ್ಲಿ ಸವಾರರ ಸ್ಥಿತಿ ಕೇಳುವಂತಿಲ್ಲ. ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದ ಸಾರ್ವಜನಿಕರು.ಬಾಗಲಕೋಟೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಬಾಗಲಕೋಟೆಯ ಜಮಖಂಡಿ ಪಟ್ಟಣದಲ್ಲಿ ನಗರಸಭೆ ವತಿಯಿಂದ ರಸ್ತೆಗಳ ದುರಸ್ತಿ ಮಾಡದೇ ಇರುವ ಹಿನ್ನೆಲೆ ಜಮಖಂಡಿ ದೇಸಾಯಿ ಸರ್ಕಲ್ ನಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಂದ ಸರ್ಕಾರಿ ಆಸ್ಪತ್ರೆಗೆ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇದೇ ರಸ್ತೆ ಹಾದು ಹೋಗಬೇಕಾಗುತ್ತದೆ. ನಗರದಾದ್ಯಂತ ಇದೇ ಸಮಸ್ಯೆ ಕಾಡುತ್ತಿರುವುದರಿಂದ ʼ ಇವರೇನು ರಸ್ತೆ ಸರಿಪಡಿಸುತ್ತಾರೆʼ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
