ತೆಲಂಗಾಣದಾದ್ಯಂತ ನಡೆದ ಪ್ರಮುಖ ಐಪಿಎಸ್ ಅಧಿಕಾರಿಗಳ ಪುನರ್ ರಚನೆಯಲ್ಲಿ ಹಿರಿಯ ಐಪಿಎಸ್ ಅಧಿಕೃಿ ವಿ.ಸಿ.ಸಜ್ಜನರ್ ಅವರನ್ನು ನೇಮಕ ಹೈದರಾಬಾದ್ ನಗರದ ಹೊಸ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ. ಕರ್ನಾಟಕದ ಹುಬ್ಬಳ್ಳಿ ಮೂಲದವರಾದ ಶ್ರೀ ಸಜ್ಜನರ್ ಅವರು ಸಿ.ಬಿ.ಸಜ್ಜನರ್ ಮತ್ತು ಗಿರಿಜಾ ಸಜ್ಜನರ ಪುತ್ರರಾಗಿದ್ದಾರೆ. ಹುಬ್ಬಳ್ಳಿಯ ಜೆಜಿ ಕಾಲೇಜ್ ಆಫ್ ಕಾಮರ್ಸ್ನಲ್ಲಿ ವಾಣಿಜ್ಯ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
2019 ರಲ್ಲಿ ನಡೆದ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಆರೋಪಿಗಳನ್ನು ಗುಂಡಿಕ್ಕಿ ಕೊಂದ ಪ್ರಕರಣ ಮತ್ತು 1996 ರಲ್ಲಿ ವಾರಂಗಲ್ ನಲ್ಲಿ ಡೆದ ಆಸಿಡ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಂಕಿತರನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಅವರ ಪಾತ್ರ ಅಪಾರವಾದದ್ದು, ಅವರನ್ನು ಎನ್ಕೌಂಟರ್ ಸ್ಪೆಷಲಿಸ್ಟ್ ಎಂಬ ಅಡ್ಡ ಹೆಸರನ್ನು ಪಡೆದರು. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್ಆರ್ಟಿಸಿ) ನಿರ್ಗಮಿತ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್, ಸಾರಿಗೆ ಮುಖ್ಯಸ್ಥರಾಗಿ ತಮ್ಮ ಕೊನೆಯ ದಿನದಂದು ಸೋಮವಾರ ಬಸ್ ಪ್ರಯಾಣ ಬೆಳೆಸಿದರು. ಅವರು ಇತರ ಪ್ರಯಾಣಿಕರೊಂದಿಗೆ ಲಕ್ಡಿಕಾಪುಲ್ನಿಂದ ಬಸ್ ಹತ್ತಿದರು. ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಯಲ್ಲಿ, ಶ್ರೀ ಸಜ್ಜನರ್ ಅವರನ್ನು ಹೈದರಾಬಾದ್ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಯಿತು, ಗೃಹ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಐಪಿಎಸ್ ಅಧಿಕಾರಿ ಸಿವಿ ಆನಂದ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಯಿತು. ಶ್ರೀ ಸಜ್ಜನರ್ ಕೆಲವೇ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
