ಗೋಕಾಕ್ : ಇಷ್ಟು ದಿನ ನಾವು, ಸಚಿವರು, ನಮ್ಮವರು, ಸ್ಥಳೀಯರು ಎಂದು ಗೋಕಾಕ್ ಪ್ರದೇಶವನ್ನು ಜಿಲ್ಲೆಯನ್ನಾಗಿ ಪರಿವರ್ತಿಸುತ್ತಾರೆ ಎಂದು ಅವರ ಮೇಲೆ ಭರವಸೆ ಇಟ್ಟು ಅದೇ ಕಾರಣಕ್ಕಾಗಿ ನಾವು ಮೂರು ನಾಲ್ಕು ವರ್ಷಗಳಿಂದ ಹೋರಾಟ – ಸತ್ಯಾಗ್ರಹ ಮಾಡದೇ ಇದ್ದೇವೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಹೇಳಿದರು.
ಹೊಸ ಜಿಲ್ಲೆಗಳ ರಚನೆಯ ಆದೇಶ ನ. 1ರ ಒಳಗಾಗಿ ಆದಾಗ ಮಾತ್ರ ಮುಂದಿನ ಪ್ರಕ್ರಿಯೆಗೆ ಸಮಯಾವಕಾಶ ಲಭಿಸುತ್ತದೆ. ನವೆಂಬರ್ 1 ಅಂದರೆ ಕನ್ನಡ ರಾಜ್ಯೋತ್ಸವದ ದಿನದೊಳಗೆ ರಾಜ್ಯ ಸರ್ಕಾರ ಗೋಕಾಕ್ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು, ಮಾಡದಿದ್ದರೆ ಮರುದಿನ ಗೋಕಾಕ್ ಜನತೆ ಒಗ್ಗಟ್ಟಿನಿಂದ ನಿರಂತರ ಹೋರಾಟ ಮಾಡುತ್ತೇವೆಂದು ಒತ್ತಾಯಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮತ್ತು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೋಳಿಯವರು ಆಡಳಿತ ಹಿತದೃಷ್ಟಿಯಿಂದ ಗೋಕಾಕ ಜಿಲ್ಲೆ ಮಾಡಬೇಕೆಂದು ಅಶೋಕ ಪೂಜಾರಿ ಒತ್ತಾಯಿಸಿದರು
