ಚಿತ್ರದುರ್ಗ : ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ವಾಲ್ಮೀಕಿ ಪುತ್ಥಳಿ ಮತ್ತು ಜಂಗಿ ಕುಸ್ತಿಗೆ 2ಲಕ್ಷ ರೂಪಾಯಿ ಹಣವನ್ನು ಧನಸಹಾಯ ಮಾಡಿದ್ದೇನೆ. ಶ್ರೀ ಹಟ್ಟಿಮಲ್ಲಪ್ಪ ನಾಯಕ ದೊರೆಗಳ ವಂಶಸ್ಥರು, ನಾಯಕನಹಟ್ಟಿ ಹಾಗೂ ನಾಯಕ ಸಮುದಾಯದವರಿಂದ ದೊರೆಗಳ ದರ್ಬಾರು, ದಸರಾ ಉತ್ಸವ, ಪುರುಷ ಮತ್ತು ಮಹಿಳಾ ಬಯಲು ಜಂಗಿಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು.
ಈ ದಿನ ಇಂತಹ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಮಣ್ಣಿನ ಶಕ್ತಿ, ರಾಜಹಟ್ಟಿ ಮಲ್ಲಪ್ಪ ನಾಯಕ ಸಮಾಧಿಯ ಸ್ಥಳವನ್ನು ಯಾರಾದರೂ ಆಕ್ರಮಿಸಿಕೊಂಡರೆ ಅವರಿಂದ ಮುಕ್ತಿ ಕೊಡಿಸುವಂತಹ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ನಾವೆಲ್ಲ ಹೋರಾಟ ಮಾಡಬೇಕು. ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಾದ ರಾಜಾಹಟ್ಟಿಮಲ್ಲಪ್ಪ ನಾಯಕ ವಂಶಸ್ಥರು, ಸಮಸ್ತ ಹೋಬಳಿಯ ನಾಯಕ ಸಮುದಾಯದವರು ಹಾಗೂ ನಾಯಕನಹಟ್ಟಿ ಹೋಬಳಿಯ ಸುತ್ತಮುತ್ತಲ ಗ್ರಾಮಸ್ಥರು, ಕುಸ್ತಿಪಟುಗಳು, ತೀರ್ಪುಗಾರರು, ಪೊಲೀಸ್ಇಲಾಖೆಯವರು, ಆಯೋಜಕರು, ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
