ಬೆಂಗಳೂರು: ಬಿಡದಿಯ ಸ್ಟುಡಿಯೋ ಸ್ಥಳದಲ್ಲಿ ಹಲವಾರು ಪರಿಸರ ಉಲ್ಲಂಘನೆಗಳು ಕಂಡುಬಂದ ನಂತರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಗ್ಬಾಸ್ ಕನ್ನಡ ೧೨ ಗೆ ನೋಟೀಸ್ ಜಾರಿ ಮಾಡಿದೆ.ಬೆಂಗಳೂರು ಸಮೀಪದ ಬಿಡದಿ ಹೋಬಳಿಯ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ನಲ್ಲಿ ನಡೆಯುತ್ತಿರುವ ಜನಪ್ರಿಯ ದೂರದರ್ಶನ ಕಾರ್ಯಕ್ರಮ ಬಿಗ್ಬಾಸ್ ಕನ್ನಡ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮವನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆ ಕೂಡಲೇ ಕಾರ್ಯಕ್ರಮವನ್ನು ನಿಲ್ಲಿಸುವಂತೆ ನೊಟೀಸ್ ನೀಡಿದೆ.
ಸದ್ಯ ಕಿಚ್ಚ ಸುದೀಪಾಯೋಜಿಸುತ್ತಿರುವ ಕನ್ನಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ೧೨ ಕರ್ನಾಟಕದಾದ್ಯಂತ ಸದ್ದು ಮಾಡುತ್ತಿದೆ. ಪರಿಸರದ ಅಗತ್ಯತೆಗಳನ್ನು ಪೂರೈಸುವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು.ಸ್ಟುಡಿಯೋ ಒಳಗಿನ ತ್ಯಾಜ್ಯ ವಿಲೇವಾರಿ ಮತ್ತು ಒಳಚರಂಡಿ ಸಂಸ್ಕರಣೆ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಸ್ಥಳವನ್ನು ಪರಿಶೀಲನೆ ಮಾಡಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ.ಪ್ರದೇಶದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಸುತ್ತಮುತ್ತಲಿನ ಪ್ರದೇಶಕ್ಕೆ ಬಿಡುತ್ತಿರುವುದನ್ನು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದರು. ಇದು ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಮಂಡಳಿ ಹೇಳಿದೆ. ಒಳ ಚರಂಡಿ ಸಮಸ್ಯೆಗಳ ಹೊರತಾಗಿ, ಘನತ್ಯಾಜ್ಯ ನಿರ್ವಹಣೆಯಲ್ಲಿ ಕಳಪೆ ಪದ್ಧತಿಯನ್ನು ಕೆಎಸ್ಪಿಸಿಬಿ ಗಮನಿಸಿದೆ.
ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ಕಪ್ಗಳು-ಪೇಪರ್ ಪ್ಲೇಟ್ಗಳು ಬಾಟೆಲ್ಗಳಂತಹ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಣೆ ಮಾಡುತ್ತಿಲ್ಲ ಮತ್ತು ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡುತ್ತಿಲ್ಲ ಎಂಬ ಮಾಹಿತಿಯನ್ನು ಗಮನಿಸಿದ ತನಿಖಾಧಿಕಾರಿಗಳು ದೊಡ್ಡ ಡೀಸೆಲ್ ಜನರೇಟರ್ ಸೆಟ್ಗಳು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದ್ದು, ಯಾವುದೇ ರೀತಿಯ ಸಂಸ್ಕರಣೆಯಿಲ್ಲದೆ ತ್ಯಾಜಯು ನೀರನ್ನು ಹೊರ ಹಾಕಲಾಗುತ್ತಿದೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇಂತಹ ಪದ್ಧತಿಗಳೂ ರಾಜ್ಯ ಮತ್ತು ರಾಷ್ಟ್ರೀಯ ಮಾಲಿನ್ಯ ಮಾನದಂಡಗಳನ್ನು ಉಲ್ಲಂಘಿಸುತ್ತವೆ ಹಾಗಾಗಿ ತ್ವರಿತವಾಗಿ ಕ್ರಮ ಕೈಗೊಳ್ಳಲು ತಿಳಿಸಿತು.
