ಬಾಗಲಕೋಟೆ : ಗ್ರಾಮಗಳ ಅಭಿವೃದ್ಧಿಗೋಸ್ಕರ ಸ್ವಚ್ಛ ಭಾರತ್ ಅಭಿಯಾನದಡಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಮಾಡುವಲ್ಲಿ ಪರಿಹಾರ ಹಣ ಬಿಡುಗಡೆ ಮಾಡುತ್ತದೆ ಆದರೆ ಬಿಡುಗಡೆಯಾದ ಹಣ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳದೆ ಹಣವನ್ನು ಸ್ವಂತಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಸಾರ್ವಜನಿಕರ ಪಾಲಿಗೆ ಗ್ರಾಮಗಳ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ.
ಬಾಗಲಕೋಟೆಯ ಅಸಂಗಿ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್ ನಿರ್ಮಾಣ ಪೂರ್ಣಪ್ರಮಾಣದ ಕಳಪೆ ಗುಣಮಟ್ಟದ್ದಾಗಿದೆ. ಇದಕ್ಕೆ 4,09,623 ರೂಪಾಯಿ ವೆಚ್ಚ ತಗುಲಿದೆ ಎಂದು ವಿವರಣೆ ನೀಡುತ್ತಿದ್ದಾರೆ. ಇದಲ್ಲದೆ ಜಮಖಂಡಿಯ ಮುಖ್ಯ ರಸ್ತೆಯಿಂದ ನದಿಯವರೆಗಿನ ಹಳ್ಳ ಹೂಳೆತ್ತುವ ಕಾರ್ಯ ಕೂಡಾ ಜರುಗಿಲ್ಲ. ಮನೆಗಳ ಒಳಚರಂಡಿ ವ್ಯವಸ್ತೆಗೆ ತಗುಲಿದ ವೆಚ್ಚ 2 ಲಕ್ಷ ರೂಪಾಯಿಗಳು ಆದರೆ ಇದರ ವ್ಯವಸ್ಥೆ ಕೂಡಾ ಸರಿಯಾದ ರೀತಿಯಲ್ಲಿ ಆಗದೆ ಮನೆ-ಮನೆ ನೀರು ಸಂಪೂರಣವಾಗಿ ರಸ್ತೆ ,ಮೇಲೆ ಹರಿದು ಬರುವ ಸ್ಥಿತಿಯಲ್ಲಿದೆ. ಇಷ್ಟೇ ಅಲ್ಲದೆ ಗ್ರಾಮದ ಹಲವು ಪ್ರದೇಶದಲ್ಲಿ ನೂರ ಆರು ತೊಂದರೆಗಳು ತಲೆಯೆತ್ತಿ ನಿಂತಿದ್ದು, ಇದರ ಬಗ್ಗೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಶೋಧ ನಡೆಸಿ ತೊಂದರೆಗಳನನು ಪರಿಹರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
