ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂದು ಅನಿಸಿಕೊಂಡಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮತ್ತೊಮ್ಮೆ ವಿವಾದಕ್ಕೆ ಸಿಲುಕಿಕೊಂಡಿದೆ’. ಪರಿಸರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಹಿನ್ನೆಲೆ ಬಿಡದಿಯ ಜಾಲಿವುಡ್ ಸ್ಟುಡಿಯೋ ನಲ್ಲಿರುವ ಬಿಗ್ ಬಾಸ್ ಮನೆಯನ್ನೇ ಅಧಿಕಾರಿಗಳು ಮುತ್ತಿಗೆ ಹಾಕಿ ಸೀಲ್ ಮಾಡಿದ್ದಾರೆ.
ಪ್ರಸ್ತುತ ಅನುಮತಿ ಇಲ್ಲದೆ ಬಿಡದಿಯಲ್ಲಿ ನಿರ್ಮಾಣವಾಗಿರುವ ಜಾಲಿವುಡ್ ಫಿಲಂ ಸಿಟಿ ಯಾವುದೇ ರೀತಿಯ ನಿಯಮ ಪಾಲನೆ ಮಾಡದೆ, ಅನುಮತಿ ಇಲ್ಲದೆ ಅಕ್ರಮವಾಗಿ ನಿರ್ಮಾಣ ಮಾಡಿರುವ ಜಾಲಿವುಡ್ ಫಿಲಂ ಸಿಟಿಯು ಪರಿಸರ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಅಲ್ಲಿನ ನೈರ್ಮಲ್ಯಯುಕ್ತ ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ತಟ್ಟೆ ಲೋಟ ಪ್ಲಾಸ್ಟಿಕ್ ವಸ್ತುಗಳನ್ನು ವಿಂಗಡಿಸದೆ ಮತ್ತು ತ್ಯಾಜ್ಯಯುಕ್ತ ನೀರನ್ನು ಸಂಸ್ಕರಣೆ ಮಾಡದೆ ಹೊರ ಬಿಡುತ್ತಿರುವ ಹಿನ್ನೆಲೆ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆಯಡಿ ಸೆಕ್ಷನ್ ೩ ೩ (ಎ ) ಮತ್ತು ನಿಯಂತ್ರಣ ಮಂಡಳಿ (ವ್ಯವಹಾರ ವಹಿವಾಟಿನ ಕಾರ್ಯವಿಧಾನ ) ನಿಯಮ ೩೪ ಮತ್ತು ೧೯೭೬ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ) ನಿಯಮಗಳಡಿಯಲ್ಲಿ ಮುಚ್ಚುವಂತೆ ಆದೇಶ ಹೊರಡಿಸಿದೆ.
ಬಿಗ್ ಬಾಸ್ ಪ್ಯಾಕ್ ಅಪ್ ಮಾಡಲು ಕಾರಣ :
ಬಿಡದಿಯಲ್ಲಿ ನಿರ್ಮಾಣವಾಗಿರುವ ಜಾಲಿವುಡ್ ಫಿಲಂ ಸ್ಟುಡಿಯೋ ಒಳಗೆ ಯಾವುದೇ ರೀತಿಯ ನಿಯಮ ಪಾಲನೆ ಮಾಡದೇ, ಅಧಿಕೃತವಾಗಿ ಯಾವುದೇ ರೀತಿಯ ಪರವಾನಗಿ ಪಡೆಯದೇ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆ ಸಾರ್ವಜನಿಕರು ಮತ್ತು ಹಲವು ಸಂಘಟನೆಗಳು ಇದರ ಬಗ್ಗೆ ಪತ್ರ ಬರೆದಿದ್ದರು. ರಾಮನಗರದಲ್ಲಿರುವ ಕೆಎಸ್ ಪಿಸಿಬಿ ಪ್ರಾದೇಶಿಕ ಕಚೇರಿಯು ೨೦೨೪ರಲ್ಲಿ ಈ ಮೊದಲು ಎರಡು ಬಾರಿ ನೋಟಿಸ್ ನೀಡಿತ್ತು. ನೋಟಿಸ್ಗೆ ಯಾವುದೇ ರೀತಿಯ ತಲೆ ಕೆಡಿಸಿಕೊಳ್ಳದೆ ನಿಯಮಗಳನ್ನು ಗಾಳಿಗೆ ತೂರಿತ್ತು. ಇದರ ಪರಿಣಾಮವಾಜಿ ಆ ಪ್ರದೇಶದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಮನರಂಜನಾ ಕಾರ್ಯಕ್ರಮ ಸೇರಿ ಹಲವಾರು ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವಂತೆ ಸ್ಟುಡಿಯೋ ಮೇಲೆ ಕನ್ನಡಪರ ಸಂಘಟನೆ ಹೋರಾಟಗಾರು ಸ್ಟುಡಿಯೋ ಮುಂದೆ ಪ್ರತಿಭಟನೆ ನಡೆಸಿ ಬೀಗ ಹಾಕಿಸಿದ್ದಾರೆ.
ಬಿಗ್ ಬಾಸ್ ಪುನಃ ಪ್ರಾರಂಭವಾಗುತ್ತಾ ?
ಹೌದು , ಸ್ಟುಡಿಯೋ ಮುಚ್ಚಿರುವ ಕಾರಾಣ ತಾತ್ಕಾಲಿವಾಗಿ ರಿಯಾಲಿಟಿ ಶೋ ನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ . ಈ ಸಮಸ್ಯೆಗಳನ್ನು ಆದಷ್ಟು ಬೇಗನೇ ಪರಿಹರಿಸಲು ಕಾರ್ಯಕ್ರಮ ಮಂಡಳಿಯು ಕಾನೂನು ಕ್ರಮವನ್ನು ತೆಗೆದುಕೊಂಡಿದೆ. ಸದ್ಯ ಈಗ ಕಾನೂನು ಮಾರ್ಗ ಹಿಡಿದಿರುವ ಆಯೋಜಕರು ಕಾನೂನು ಕ್ರಮ ಕ್ಕೈಗೊಳ್ಳಲು ಮುಂದಾಗಿದ್ದಾರೆ.
