ಗಂಗಾವತಿ : ಕೊಪ್ಪಳ ರಸ್ತೆಯ ಲೀಲಾವತಿ ಅಪೊಲೊ ಆಸ್ಪತ್ರೆ ಮುಂಭಾಗದಲ್ಲಿ ಬರ್ಭರವಾಗಿ ಹತ್ಯೆ ಮಾಡಲಾಗಿದೆ. ಸುಮಾರು ಮಧ್ಯರಾತ್ರಿ ೨ ಗಂಟೆ ವೇಳೆಯಲ್ಲಿ ಎಲುಬು ಕೀಲು ಆಸ್ಪತ್ರೆ ಮುಂಭಾಗದಲ್ಲಿ ಗ್ಯಾಂಗ್ವೊಂದು ದೇವಿ ಕ್ಯಾಂಪ್ನಿಂದ ಬೈಕ್ನಲ್ಲಿ ವೆಂಕಟೇಶ್ (೩೧) ಎಂಬಾತ ಗಂಗಾವತಿಗೆ ವಾಪಸ್ಸಾಗುತ್ತಿದ್ದ ವೇಳೆ ಗ್ಯಾಂಗ್ವೊಂದು ಆತನನ್ನು ಹಿಂಬಾಲಿಸಿಕೊಂಡು ಬಂದ ಗುಂಪು ಯುವಕನ ಬೈಕ್ಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿರುವ ಪುಂಡರ ಗ್ಯಾಂಗ್. ಊಟ ಮಾಡಿ ಸ್ನೇಹಿತನ ಜೊತೆ ಗಂಗಾವತಿಗೆ ಹೋಗುತ್ತಿದ್ದ ವೇಳೆ ಹಳೆ ದ್ವೇಷದ ಕಾರಣವಾಗಿ ಗ್ಯಾಂಗ್ ಕಟ್ಟಿಕೊಂಡು ಬಂದು ಯುವಕನ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ಪ್ರಕರಣ ಸಂಬಂಧ ಗಂಗಾವತಿ ನಗರ ವ್ಯಾಪ್ತಿಯ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
