ಮೂಡಲಗಿ : ಮೂಡಲಗಿಯ ಕಮಲದಿನ್ನಿ ಗ್ರಾಮದ ನಿವಾಸಿಯಾದಂತಹ ಆಕಾಶ್ ಸದಾಶಿವ ಕಂಬಾರ (24) ಎಂಬಾತ ತನ್ನ ಪತ್ನಿ ಸಾಕ್ಷಿಯನ್ನು ಕೊಂದು ಶವವನ್ನು ಪೆಟ್ಟಿಗೆಯಲ್ಲಿ ಮುಚ್ಚಿಟ್ಟಿರುವ ಘಟನೆ ನಡೆದಿದೆ.ಕಮಲದಿನ್ನಿ ಗ್ರಾಮದಲ್ಲಿ ವಾಸಿಸುತ್ತಿದ್ದ ಕುಟುಂಬ ನಿವಾಸಿಗಳಾದ ಆಕಾಶ್ ಮತ್ತು ಸಾಕ್ಷಿ. ಪತಿಯು ತನ್ನು ಹೆಂಡತಿಯನ್ನು ಕೊಂದು ಶವವನ್ನು ಮಂಚದ ಕೆಳಗಿರುವ ಪೆಟ್ಟಿಗೆಯಲ್ಲಿ ಬಚ್ಚಿಟ್ಟು, ತನ್ನ ಮೊಬೈಲ್ನ್ನು ಸ್ವಿಚ್ ಆಫ್ ಮಾಡಿಕೊಂಡು ಪರಾರಿ ಆಗಿದ್ದಾನೆ. ಸಂಜೆ ವೇಳೆ ಆಕಾಶನ ತಾಯಿ ಊರಿಗೆ ಹೋಗಿದ್ದ ವೇಳೆ ಮನೆಯಲ್ಲಿ ದುರ್ವಾಸನೆ ಬರುತ್ತಿರುವುದ್ನು ಕಂಡು ಮಂಚದ ಕೆಳಗಿರುವ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪತ್ತೆಯಾದ ಕೂಡಲೆ ಪೊಲೀಸ್ರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಗೋಕಾಕ್ ಡಿವೈಎಸ್ಪಿ ರವಿ ನಾಯಕ ಹಾಗೂ ಸಿಪಿಐ ಶ್ರೀಶೈಲ್ ಬ್ಯಾಕೂಡ ಮತತು ಪಿಎಸ್ಐ ರಾಜು ಪೂಜಾರಿ ಭೆಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಾಕ್ಷಿ ಸಾವಿನ ಬಗ್ಗೆ ನಿಖರ ಕಾರಣ ತಿಳಿದು ಬಾರದ ಹಿನ್ನೆಲೆ ಹಲವಾರು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಕಳೆದ ೫ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ದಂಪತಿಗಳು. ದಂಪತಿಗಳ ಜೊತೆ ಗಂಡನ ಅತ್ತೆ- ಮಾವ ಎಲ್ಲರೂ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದರು.ಸಾಕ್ಷಿ ಅತ್ತೆ ಊರಿಗೆ ಹೋಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಮನೆಯಲ್ಲಿ ಮಾವ ಸದಾಶಿವ ಹಾಗೂ ಮೃತಳ ಪತಿ ಆಕಾಶ್ ಮನೆಯಲ್ಲಿ ಇದ್ದರು ಆದರೆ ಸಾಕ್ಷಿ ದೇಹ ದುರ್ವಾಸನೆ ಬರುವವರೆಗೂ ಮಾವ ಸದಾಶಿವ ಏನು ಮಾಡುತ್ತಿದ್ದ ಎಂಬ ಪ್ರಶ್ನೆ ಯಕ್ಷಪ್ರಶ್ನೆಯಾಗಿದೆ. ಇನ್ನೊಂದೆಡೆ ಮೃತಾಳ ಕುಟುಂಬಸ್ಥರು ವರದಕ್ಷಣೆಗಾಗಿ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಮೂಡಲಗಿ ಪೊಲೀಸ್ ಠಾಣೆಗೆ ದೂರು ನೀಡಿದಾರೆ. ಕೊಲೆ ಮಾಡಿದ ಆಕಾಶ್ ಮಂಗಳವಾರ ಸಂಜೆ ಊರಲ್ಲೇ ಇದ್ದ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ ಹಾಗಾಗಿ ಸಾಕ್ಷಿ ಸಾವಿನ ಸುತ್ತಾ ಅನುಮಾನಗಳು ಹುಟ್ಟಿಕೊಂಡಿವೆ. ಸಾಕ್ಷಿ ಕೊಲೆಗೆ ನಿಖರವಾದ ಕಾರಣ ತಿಳಿಯ ಹಿನ್ನೆಲೆ ತನಿಖೇಯನ್ನು ಆರಂಬಿಸಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
