ರಾಯಚೂರು: ರಾಯಚೂರಿನ ಬಸ್ ನಿಲ್ದಾಣದ ಬಳಿ ಅನಧಿಕೃತವಾಗಿ ಸ್ಥಾಪಿತವಾಗಿರುವ ಡಬ್ಬ ಅಂಗಡಿಗಳಿಂದ ಸ್ಥಳೀಯರು ಮತ್ತು ಪ್ರಯಾಣಿಕರಿಗೆ ನಿತ್ಯ ಓಡಾಡಲು ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಅಂಗಡಿ ಮುಗಟ್ಟುಗಳ ಹಾವಳಿ ಹೆಚ್ಚಾಗಿರುವುದರಿಂದ ನಿಲ್ದಾಣಕ್ಕೆ ಬಸ್ ಆಗಮಿಸುತ್ತಿಲ್ಲದ ಕಾರಣ ಪ್ರಯಾಣಿಕರು ಸರಿಯಾದ ಸಮಯಕ್ಕೆ ತಮ್ಮ ಸ್ಥಳಗಳಿಗೆ ತಲುಪಲು ಒದ್ದಾಡುತ್ತಿದ್ದಾರೆ. ಇದು ದಿನ ವಾರದ ಸಮಸ್ಯೆಯಲ್ಲ, ಸುಮಾರು ತಿಂಗಳುಗಳಿಂದ ಇದೇ ಸಮಸ್ಯೆಯಾಗುತ್ತಿರುವುದರಿಂದ ಗ್ರಾಮಕ್ಕೆ ಬರುವ ಬಸ್ಗಳು ಗ್ರಾಮದ ತುಂಬಲಗಡ್ಡಿ ಸರ್ಕಲ್ ಬಳಿ ಬಸ್ಗಳು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇನ್ನು ಪ್ರಯಾಣಿಕರು ಸುಗಮ ಸಂಚಾರದ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ರಸ್ತೆ ಬಳಿಯ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಸ್ಥಳೀಯರು ಮನವಿ ಮಾಡಿದ್ದರು, ಆದರೆ ನಿಗಧಿತ ಸಮಯಕ್ಕೆ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡದ ಹಿನ್ನೆಲೆ ಸ್ಥಳೀಯ ಶಾಸಕರಿಂದ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡದಿದ್ದಲ್ಲಿ ಸುಧೀರ್ಘ ಹೋರಾಟ ಮಾಡುತ್ತೇವೆ ಎಂದು ಮುಖಂಡರು ತಿಳಿಸಿದ್ದಾರೆ.
