ಬೆಂಗಳೂರು : ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಂತಹ ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋ ಬಿಡದಿಯ ಜೊಲಿವುಡ್ ಸ್ಟುಡಿಯೋನ;ಲ್ಲಿ ನಡೆಯುತ್ತಿದ್ದ ಶೋ ಕೆಲ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಜಾಲಿವುಡ್ ಸ್ಟುಡಿಯೋ ಮೇಲೆ ಪರಿಸರ ಮತ್ತು ವಾಯಿ ನಿಯಂತ್ರಣ ಮಂಡಳಿಯಿಂದ ಎಚ್ಚರಿಕೆ ನೋಟೀಶ್ ನೀಡಿ ನಂತರ ಕೆಲ ಸಂಘಟನೆಗಳು ಹೋರಾಟ ಮಾಡಿ ಬೀಗ ಹಾಕಿಸಿದ್ದರು . ಇದರ ಹಿನ್ನೆಲೆ ರಾತ್ರೋ ರಾತ್ರಿ ಬಿಗ್ ಮನೆಯಿಂದ ೧೭ ಸ್ಪರ್ಧಿಗಳು ಹೊರನಡೆದಿದ್ದರು.

ಇನ್ನು ಈ ವಿಚಾರವಾಗಿ ಕೋರ್ಟ್ ಮೊರೆ ಹೋದಂತಹ ಬಿಗ್ಬಾಸ್ ಸಂಸ್ಥಾಪಕರು ಮತ್ತು ವ್ಯವಸ್ಥಾಪಕರು ಕೋರ್ಟ್ಗೆ ಮನವಿ ಮಾಡಿದ್ದರು. ಸದ್ಯ ಇದರ ವಿಚಾರವಾಗಿ ಬೀಗ ಬಿದ್ದಿದ್ದ ಮನೆಗೆ ತೆರೆ ಎಳೆದಿದ್ದಾರೆ. ಪರಿಸರ ನಿಯಮ ಉಲ್ಲಂಘನೆ ಮಾಡಿರುವ ಆರೋಪದಡಿ ಬಿಗ್ಬಾಸ್ ಮನೆಯನ್ನು ತಾತ್ಕಾಲಿಕವಾಗಿ ಸೀಜ್ ಮಾಡಿದ್ದು- ಶೋ ಸ್ಥಗಿತಗೊಳಿಸಲಾಗಿತ್ತು.ಈ ಸಂಬಂಧ ಬಿಗ್ಬಾಸ್ ಪುನಶ್ಚಾರಂಭಕ್ಕೆ ಅವಕಾಶ ನೀಡುವುದಾಗಿ ಸೂಚನೆ ನೀಡಿದೆ. ಪುನರಾರಂಭಕ್ಕೆ ಕಾರಣಕರ್ತರಾದ ಕರ್ನಾಟಕದ ಉಪಮುಖ್ಯಮಂತ್ರಿಯವರಾದ ಡಿಕೆ ಶಿವಕುಮಾರ್ರವರ ಮಧ್ಯ ಪ್ರವೇಶದ ಬಳಿಕ ಬೆಂಗಳೂರಿನ ದಕ್ಷಿಣ ಜಿಲ್ಲಾ ಅಧಿಕಾರಿಗಳು ಗುರುವಾರ ಬೆಳಗಿನ ಜಾವ ಪುನಃ ಆರಂಭವಾಗಿದೆ.ಸ್ಟುಡಿಯೋಗೆ ಮತ್ತೊಂದು ಅವಕಾಶ : ಬಿಗ್ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿದ್ದ ಬಿಡದಿಯ ಜಾಲಿವುಡ್ ಆವರಣದ ಸೀಲ್ನ್ನು ತೆಗೆದುಹಾಕಲು ಬೆಂಗಳೂರಿನ ದ. ಜಿಲ್ಲಾಧೀಕಾರಿಗೆ ನಿರ್ದೇಶನ ಮಾಡಿದ್ದೇನೆ ಮತ್ತು ಕಾರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಿಗಧಿಪಡಿಒಸಿದ ಮಾನದಂಡಗಳನ್ನು ಉಲ್ಲಂಘನೆಗಳನನು ಪರಿಹರಿಸಲು ಸ್ಟುಡಿಯೋಗೆ ಸಮಯಾವಕಾಶ ನೀಡಲಾಗುವುದು” ಎಂದು ಡಿಕೆ ಶಿವಕುಮಾರ್ ಹೇಳಿದರು.
ಅವರಿಗೆ ಪ್ರತಿಒಕ್ರಿಯಿಸಿದ ಸುದೀಪ್ ಮತ್ತು ಬಿಗ್ಬಾಸ್ ತಂಡವು ಈ ಗೊಂದಲದಲ್ಲಿ ಭಾಗಿಯಾಗಿದೆ ಎಂದು ಒಪ್ಪಿಕೊಂಡಿದ್ದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. “ ಗೌರವಾನ್ವಿತ @DKShivaKumar ಸರ್ ಅವರಿಗೆ ಸಕಾಲಿಕ ಬೆಂಬಲ ನೀಡಿದ್ದಕ್ಖಾಗಿ ನಾಣು ಹೃತ್ಪೂರ್ಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ಬಿಬಿಕೆ ಭಾಗಿಯಾಗಿಲ್ಲ ಅಥವಾ ಭಾಗವಾಗಿರಲಿಲ್ಲ ಎಂದ ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ ಮತ್ತು #Nalpad ವರ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದಗಳು “ ಎಂದು ಅವರು ಹೇಳಿದ್ದಾರೆ.
