ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹಣಕಾಸು ವ್ಯವಹಾರ ಸಂಬಂಧಿತವಾಗಿ ಬೆಲಗಾವಿಯ ಗೋಕಾಕ್ ಗ್ಯಾಂಗ್ವೊಂದು ಕಚೇರಿಗೆ ಏಕಾಏಕಿ ನುಗ್ಗಿ ಕಾಂಟ್ರ್ಯಾಕ್ಟರ್ ಮೋಹನ್ ಚೌಹಾಣ್ ಎಂಬ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಕಾಂಟ್ರ್ಯಾಕ್ಟ್ರ್ ಕೆಲಸ ನಿರ್ವಹಿಸುತ್ತಿದ್ದ ಮೋಹನ್ ಸಬ್ ಕಾಂಟ್ರ್ಯಾಕ್ಟರ್ ಕೊಡುತ್ತಿದ್ದ ಕಾರಣ ಹಣ ನೀಡುತ್ತಿಲ್ಲವೆಂದು ಗ್ಯಾಂಗ್ವೊಂದು ಏಕಾಏಕಿ ಕಚೇರಿಯೊಳಗೆ ನುಗ್ಗಿ ಬಲವಂತವಾಗಿ ಎಳೆದೊಯ್ದು ಮನಬಂದಂತೆ ಹಲ್ಲೆ ಮಾಡಿದ್ದಲ್ಲದೆ ಇದನ್ನು ತಡೆಯಲು ಪ್ರಯತ್ನಿಸಿದ ಮಹಿಳೆಯನ್ನು ಕೂಡಾ ಕರುಣೆಯಿಲ್ಲದೆ ಂನಬಂದಂತೆ ಎಳೆದಾಡಿದ್ದಾರೆ. ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದ ೧೨ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ತಿಳಿಸಿದರು.
