ಜಗಳೂರು : ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾನ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳ ಗೋಳಾಟ ಕೇಳೋರ್ಯಾರು…! ಜಗಳೂರು ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಿದರಕೆರೆ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ನಿವಾಸದ ವಿದ್ಯಾರ್ಥಿಗಳು ಸಂಜೆ –ರಾತ್ರಿ ಸಮಯದಲ್ಲಿ ಶೌಚಕ್ಕೆತೆರಳಲು ಪರದಾಡುತ್ತಿದ್ದಾಋಎ. ರಾತ್ರಿ ಸಮಯದಲ್ಲಿ ವಿಷಕಾರಿ ಕೀಟಗಳು ಅಥವಾ ಇನ್ನಿತರ ಬೇರೆ ತೊಂದರೆಗಳು ಉಂಟಾಗುವ ಸ್ಥಿತಿ ಎದುಯರಾಗಿದೆ. ಇದರ ಬಗ್ಗೆ ಹಾಸ್ಟೆಲ್ ವಾರ್ಡನ್ ದೇವೇಂದ್ರಪ್ಪರ ಹತ್ತಿರ ಚರ್ಚೆ ಮಾಡಿದಾಗ ಬೇಕಾಬಿಟ್ಟಿ ಸಮಜಾಯಿಶಿ ನೀಡಿ ಕಳಚಿಕೊಳ್ಳುತ್ತಿದ್ದಾರೆ.
