
ಗದಗ: ಗದಗದ ಎಪಿಎಂಸಿ ಮಾರುಕಟ್ಟೆಯ ಬಳಿ ಶೇಂಗಾ ಬೆಳೆ ಬೆಲೆ ದಿಢಿರ್ ಕುಸಿತದ ಪರಿಣಾಮವಾಗಿ ರಸ್ತೆ ತಡೆದು ಪಂಚಾಕ್ಷರಿ ಟ್ರೇಡರ್ಸ್ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ವರ್ತಕರು, ಖರೀದಿದಾರರು ಸೇರಿ ರೈತರಿಗೆ ಮೋಸ ಮಾಡುತ್ತಿದ್ದಾರೆ ನಿನ್ನೆ 4ರ-೫ ಸಾವಿರ ಕ್ವಿಂಟಾಲ್ ಶೇಂಗಾ ಇಂದು ದಿಢೀರನೆ 2000ಕ್ಕೆ ಕುಸಿದ ಪರಿಣಾಮ ರೈತರು ಕೆಂಡಾಮಂಡಲವಾಗಿದ್ದಾರೆ. ಶೇಂಗಾ ಮಾರಾಟದ ವೇಳೆ ಕ್ವಿಂಟಾಲ್ಗೆ 5000 ರೂಪಾಯಿ ನಿಗಧಿಯಾಗಿದ್ದು ಇಂದು ಬೆಲೆ ಕುಸಿದ ಪರಿಣಾಮ ರೈತರಿಗೆ ಭಾರೀ ಮೋಸ –ನಷ್ಟ ಉಂಟಾಗಿದೆ. ವರ್ತಕರು-ದಲ್ಲಾಳಿಗಳ ಕುತಂತ್ರ, ಎಪಿಎಂಸಿ ಅಧಿಕಾರಿಗಳು ಕೂಡಾ ನಮ,ಮ ನೆರವಿಗೆ ಬುರುತ್ತಿಲ್ಲ ಎಂದು ರೈತರು ಆಕ್ರೋಶಗೊಂಡಿದ್ದಾರೆ.
