
ಜಗಳೂರು: ದಿನಕ್ಕೆ ಸುಮಾರು ೧೦೦ಕ್ಕೆ ೫೦ರಷ್ಟು ಸಾಲಬಾಧೆಯಿಂದ ರೈತರ ಆತ್ಮಹತ್ಯೆ ನಿಲ್ಲದು, ಇದಕ್ಕೆ ಇನ್ನೂ ಸಿಕ್ಕಿಲ್ಲವಾ ಪರಿಹಾರ.70 ವರ್ಷದ ರೈತ ತಿಪ್ಪೇರುದ್ರಪ್ಪ ಲೇಟ್ ಹನುಮಂತಪ್ಪ ದಾವಣಗೆರೆ ಅ್ಯಕ್ಸಸ್ ಬ್ಯಾಂಕ್ ನಲ್ಲಿ ಸುಮಾರು ಲಕ್ಷ ಸಾಲ ಮಾಡಿದ್ದ ಇತ್ತಿಚಿಗೆ ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ವ್ಯವಸ್ಥಾಪಕರು ನೋಟಿಸ್ ಕಳುಹಿಸಿದ ಹಿನ್ನಲೆಯಲ್ಲಿ ಸಾಲಬಾದೆ ತಾಳಲಾರದೆ ರೈತ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಗಳೂರಿನ ರೈತನೊಬ್ಬ ಸಾಲಬಾಧೆ ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಗಳೂರಿನ ಚಿಕ್ಕ ಅರಕೆರೆ ಗ್ರಾಮದ ರೈತನೋರ್ವ ಬ್ಯಾಂಕ್ನಲ್ಲಿ ಸಾಲ ಮಾಡಿ ಬೊರ್ವೆಲ್ ಕೊರೆಸಿ, ಅಡಿಕೆ ಬೆಳೆ ಫಲವತ್ತತೆ ಸಿಗದೆ ಬೆಳೆದು ಸರಿಯಾದ ಸಮಯಕ್ಕೆ ಫಲ ನೀಡದೆ ನಷ್ಠ ಅನುಭವಿಸಿ ಅತಿಯಾದ ಸಾಲ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿದ ರೈತ ದಾರಿ ತೋಚದೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ತಾಲ್ಲೂಕಿನ ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ಈ ಸಂಬಂಧವಾಗಿ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪಿ.ಐ ಇನ್ಸಪಕ್ಟರ್ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
