

ಬಾಗಲಕೋಟೆ: ಬಾಗಲಕೋಟೆಯ ಜಮಖಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಪತ್ರಕರ್ತ ಬಸವರಾಜ ಕಾನಕೊಂಡ ರಸ್ತೆ ಬಳಿ ಅಪಘಾತ ನಡೆದಿದ್ದು,24 ಗಂಟೆಯೊಳಗೆ ಬೇಧಿಸಿದ್ದಾರೆ. ಆ.8ರ ಬುಧವಾರ ನಡೆದಾಪಘಾತದಲ್ಲಿ ಪತ್ರಕರ್ತ ಬಸವರಾಜ ಕಾನಕೊಂಡ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.ಪ್ರಕರಣದ ಜಾಡನ್ನು ಹಿಡಿದ ಖಾಕಿ ತನಿಖೆಯನ್ನು ಕೈಗೊಂಡಿದ್ದ ಪೊಲೀಸರು ಹಲವಾರು ಅನುಮಾನಗಳು ಉಂಟಾದ ಹಿನ್ನೆಲೆ ಇದನದ್ನು ಕೊಲೆ ಪ್ರಕರಣ ಎಂದು ತಿಳಿದು, ಪ್ರಕರಣಕ್ಕೆ ಸಂಬಂಧಿತರಾ ಂಊವರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಮೊದಲಿಗೆ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡಿದ್ದು, ತೀವ್ರ ಅನುಮಾನಗಳು ಹುಟ್ಟಿಕೊಂಡ ಹಿನ್ನೆಲೆ ತನಿಖೆಯನ್ನು ತೀವ್ರಗೊಳಿಸಿದಾಗ ಡಿಕ್ಕಿ ಹೊಡೆದ ವಾಹನವನ್ನು ಅಲ್ಫಾಕ್ ಸುಲೇಮಾನ್ ಮುಲ್ಲಾ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಆ ವಾಹನದ ಮಾಲಿಕ ಸೇರಿ ಆತನ ಸಹಚರರಾದ ಹೊಸೂರು ನಿವಾಸಿಗಳಾದ ನಂದೀಶ್, ಮಹದೇವ್ ಪವಾಡಿ ಮತ್ತು ಮಹೇಶ್ ಶ್ರೀಶೈಲ ಪವಾಡಿ ಎಂದು ಗುರುತಿಸಲಾಗಿದೆ. ವಿಚಾರಣೆಯ ಸಮಯ, ಅಕ್ಷಾಕ ಸುಲೇಮಾನ್ ಮುಲ್ಲಾ ಸ್ವಯಂಪ್ರೇರಿತವಾಗಿ ತಪ್ರೊಪ್ಪಿಗೆಯನ್ನು ನೀಡಿದ್ದು, ಮದರಖಂಡಿ ಗ್ರಾಮದ ಬಳಿ ಬಸವರಾಜ ಕಶನಗೊಂಡ ಅವರ ವಾಹನಕ್ಕೆ ಡಿಕ್ಕಿ ಹೊಡೆದು ಉದ್ದೇಶಪೂರ್ವಕವಾಗಿ ಸಾವಿಗೆ ಕಾರಣವಾಗಿದ್ದಾಗಿ ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಆರೋಪಿಗಳು ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಅವರನ್ನು ಬ್ಲಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಪತ್ರಕರ್ತ ಕಳೆದ 4 ವರ್ಷಗಳಿಂದ ಸತಾಯಿಸುತ್ತಿದ್ದ ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಪತ್ರಕರ್ತ ಬಸವರಾಜನನ್ನು ತೇರದಾಳದ ಸಣ್ಣ ಹೊಟೇಲ್ ನಲ್ಲಿ ಚರ್ಚೆಗೆಂದು ಕರೆಸಲಾಗಿತ್ತು. ಪರಿಚಯಸ್ತರಾಗಿದ್ದ ರಾಘವೇಂದ್ರ ತೇಲಿ ಎಂಬುವರ ಮಧ್ಯಸ್ಥಿಕೆಯಲ್ಲಿ ಚರ್ಚೆ ಮುಗಿಸಿಕೊಂಡು ಊಟ ಮಾಡಿಕಕೊಂಡು ಹೊರಟೆವು ಎಂದು ಹೇಳಿದ್ದಾರೆ. ಊಟ ಮುಗಿಸಿ ಹೊರಟ ಬಸವರಾಜು ಅಶ್ನಾಕ್ ಸಹಚರರಾದ ಸಂದೀಶ್ವರ್ ಮತ್ತು ಮಹೇಶ್ ಹಿಂಬಾಲಿಸುತ್ತಾ ಬಂಡಿಗಣಿ ಕ್ರಾಸ್ ಬಳಿ ಹೊಂಚು ಹಾಕುತ್ತಿದ್ದರು. ಪೂರ್ವ ನಿಯೋಜನೆಯಂತೆ ಹತ್ತಿರಕ್ಕೆ ಬಂದ ಬಸವರಾಜನ ವಾಹನಕ್ಕೆ ಎದುರಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದು ಅಪಘಾತ ಎಂಬಂತೆ ಸೃಷ್ಟಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸಾಕ್ಷಿ, ಹೇಳಿಕೆ ಮತ್ತು ವಿಧಿ-ವಿಜ್ಞಾನ ಸುಳಿವುಗಳಿಂದ ದೃಢೀಕರಣ ಮಾಡಿ ತಪ್ಪೊಪ್ಪಿಗೆ ಆಧಾರದ ಮೇಲೆ ಪ್ರಕರಣವನ್ನು ದೃಢೀಕರಣ ಮಾಡಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
