
ರಾಯಭಾಗ : ರಾಯಭಾಗ ತಾಲ್ಲೂಕಿನ ಹಾರುಗೇರಿ ಕ್ರಾಸ್ನ ಬಸವೇಶ್ವರ ಸರ್ಕಲ್ ಬಳಿ ಕಾರ್ನಾಟಕ ರಾಜ್ಯ ರೈತ ಸಂಘದ ರೈತರು ಸೂಕ್ತ ಕಬ್ಬಿನ ಬೆಂಬಲ ಬೆಲೆ ನಿಗಧಿ ಮಾಡಬೇಕು ಮತ್ತು ಹಲವಾರು ಕಾರ್ಖಾನೆಗಳನ್ನು ಉಳಿಸಿಕೊಂಡಿರುವ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಿ ಕಬ್ಬಿನಬೆಂಬಲ ಬೆಲೆಯನ್ನು ನಿಗದಿ ಮಾಡುವಂತೆ ಹಲವು ಮುಖಂಡರು ಹಾಗೂ ಕರ್ನಾಟಕ ರೈತ ಸಂಘದ ಅಧ್ಯಕ್ಷರು ಚುನ್ನಪ್ಪ ಪೂಜಾರಿ ಹಾಗೂ ಗೌರವಾಧ್ಯಕ್ಷರಾದ ಶಶಿಕಾಂತ್ ಪಡಸಲಗಿ ಮಾಧ್ಯಮದವರ ಜೊತೆ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಕಾರ್ಖಾನೆ ಮುಖ್ಯಸ್ಥರು ಬಂದು ನಮ್ಮ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ನೀಡದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.
ಸರ್ಕಾರ ನಮಗೆ ಕಬ್ಬಿನ ಬೆಲೆಯು ಪ್ರತಿ ಟನ್ಗೆ 4500 ರೂಪಾಯಿ ನಿಗದಿ ಮಾಡಬೇಕು ಎಂದು ಹೇಳಿದ್ದಾರೆ. ಇಒದರ ವಿಚಾರವಾಗಿ ಬೆಳಗಾವಿ ಜಿಲ್ಲಾಧಿಕಾರಿಯಾದ ಡಿ.ಆರ್. ಮೊಹಮ್ಮದ್ ರೋಷನ್ರವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಅವರು ಮಾತನಾಡಿ ಕಾರ್ಖಾನೆ ಮಾಲೀಕರು ಹಾಗೂ ವ್ಯವಸ್ಥಾಪಕರು ಜೊತೆ ಒಂದು ಸಭೆಯನ್ನು ಮಾಡಿ ಕಬ್ಬಿನ ಬಾಕಿ ಮೊತ್ತ ಹಾಗೂ ಬೆಂಬಲ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಕರ್ನಾಟಕ ರೈತ ಸಂಘದ ಸದಸ್ಯರಿಗೆ ಭರವಸೆ ನೀಡಿದರು.
