ಬಾಗಲಕೋಟೆ : ಬಾಗಲಕೋಟೆಯ ರಬಕವಿಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಗ್ರಾಮದ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಕೆಲ ವಿಷಯಗಳ ಕುರಿತು ಚರ್ಚಿಸಿ ರೈತರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ನೀಡುವಂತೆ ಭರವಸೆ ನೀಡಿದರು. ಆತ್ಮಹತ್ಯೆಗೆ ಶರಣಾಗಿರುವ ನೇಕಾರರು ಮತ್ತು ಅವರ ಕುಟುಂಬಕ್ಕೆ ಪರಿಹಾರ ನೀಡಬಬೇಕು, ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ೪೦೦೦ ರೂಪಾಯಿ ನಿಗಧಿ ಮಾಡಬೇಕು, ಎಂದು ರೈತ ಮತ್ತು ನೇಕಾರರಿಂದ ಸಿಎಂಗೆ ಮನವಿ ಮಾಡಿದರು. ಸದ್ಯ ರಾಜ್ಯದಲ್ಲಿ ಸುಮಾರು 55 ಜನ ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದು, ಅವುಗಳಲ್ಲಿ ಅನೇಕ ಪ್ರಕರಣಗಳು ಇತ್ಯರ್ಥಗೊಳ್ಳದೆ ಸೂಕ್ತ ಪರಿಹಾರ ಬಂದಿರುವುದಿಲ್ಲ ಅವರಿಗೆಲ್ಲ ಸೂಕ್ತ ಪರಿಹಾರ ನೀಡುವಂತೆ ನೇಕಾರ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯ ಮಾಡಿದರು.
ನೇಕಾರರ ಸಂಕಷ್ಟ ಕೇಳುವವರಿಲ್ಲ ಪತಿಯನ್ನು ಕಳೆದುಕೊಂಡು ಒಬ್ಬ ಒಂಟಿ ಮಹಿಳೆ ಮಕ್ಕಳನ್ನು ಕಟ್ಟಿಕೊಂಡು ಬದುಕು ಸಾಗಿಸುವುದ ಕಷ್ಟಕರವಾಗಿದೆ, ಕೆಲಸ ಮಾಡುವ ನೇಕಾರರಿಗೆ ನೇಕಾರರ ಕಾರ್ಡ್ಗಳನ್ನು ವಿತರಿಸಿ, ಸಾಲಮನ್ನಾ ಜೊತೆಗೆ ನಿವೇಶನ ಹಂಚಿಕೆ ಮಾಡಬೇಕು ಹಾಗೂ 55 ನೇಕಾರರಿಗೆ ಕನಿಷ್ಟ 5000 ರೂಪಾಯಿ ಮಾಸಾಶನವನ್ನು ಜಾರಿಗೆ ಮಾಡಬೇಕು ಎಂದು ಸಮ್ಮೇಳನದಲ್ಲಿ ಸಿಎಂ ಅವರಿಗೆ ಮನವಿಯನ್ನು ಸಲ್ಲಿಸಲು ಮುಖಂಡರು ಮತ್ತು ರೈತರು ಕಾದು ನಿಂತು ಅರ್ಜಿ ಸಲ್ಲಿಸಿ ರೈತರು ಮತ್ತು ನೇಕಾರ ಮಹಿಳೆಯರು ತಮ್ಮ ಸಂಕಷ್ಟವನ್ನು ತೋಡಿಕೊಂಡರು. ಮಳೆ ಹೆಚ್ಚಾದ ಕಾರಣ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ ,ಜಿಲ್ಲೆಯ ಸಕ್ಕರೆ ಕಾರ್ಖಾನೆಯಲ್ಲಿ 2021-22ನೇ ಸಾಲಿನ ರೂ.62ರಂತೆ ಬಾಕಿ ಉಳಿದ ಮೊತ್ತದ ಜಿತೆಗೆ ಕಳೆದ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಬೆಳೆಯನ್ನು ತೆಗೆಯಲು ರೈತರ ಖರ್ಚು ಹೆಚ್ಚಾಗಿರುವುದರಿಂದ ಪ್ರಸ್ತುತ ಸಾಲಿನಿಂದ ಪ್ರತಿ ಟನ್ಗೆ ರೂ.4000 ದರ ನಿಗಧಿ ಮಾಡಿ ರೈತರಿಗೆ ಅನುಕೂಲವಾಗುವಂತೆ ರೈತ ಮುಖಂಡ ಹನುಮಂತ ಮಗದುಮ್, ರಾಜು ನದಾಫ್ ಸೇರಿದಂತೆ ಹಲವರಿಂದ ಬೇಡಿಕೆ ಡೇರಿಸುವಂತೆ ಒತ್ತಾಯ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯರವರು ದೇವೆಗೌಡರ ಆರೋಗ್ಯದಲ್ಲಿ ಚತರಿಕೆ ಕಂಡಿದೆ ಸದ್ಯ ಅವರು ಆರಾಮವಾಗಿದ್ದಾರೆ ಎಂದು ಡಾ.ಸತ್ಯನಾರಾಯಣರವರು ಹೇಳಿದ್ದಾರೆ. ಆರ್ಎಸ್ಎಸ್ನವರು ತಮ್ಮ ಕಾರ್ಯಕ್ರಮವನ್ನು ನಡೆಸಿಕೊಳ್ಳಲು ಸರ್ಕಾರಿ ಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ ಇದರ ವಿಚಾರವಾಗಿ ಪರಿಶೀಲಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಚೀಫ್ ಸೆಕ್ರೇಟರಿಗೆ ಸೂಚಿಸಿದ್ದೇನೆ ಎಂದರು.
ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಸಿಎಂ ಡಿನ್ನರ್ ಪಾರ್ಟಿಗೂ, ಸಂಪುಟ ಪುನರ್ರಚನೆಗೂ ಯಾವುದೇ ಸಂಬಂಧವಿಲ್ಲ. ನಾನು ಆಗಾಗ ಎಲ್ಲರಿಗೂ ಊಟ ಹಾಕಿಸುತ್ತಾ ಇರ್ತೇನೆ, ಇದರಲ್ಲೇನು ಸ್ಪೆಷಲ್ ಇಲ್ಲ ಆದರೆ, ತಮಗೆ ಹಾಗೂ ಬಿಜೆಪಿಯವರಿಗೆ ವಿಶೇಷ ಎಂದು ನಕ್ಕು ಸುಮ್ಮನಾದ ಸಿಎಂ. ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಹಣ ಎತ್ತಿಡುವ ವಿಚಾರವಾಗಿ ಯುಕೆಪಿಗೆ ಹಣ ಕೊಡಲು ಶುರುಮಾಡುತ್ತೇನೆ ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಲು ಹೇಳುತ್ತೇನೆ ಎಂದರು.
