ವಿಜಯಪುರ : ವಿಜಯಪುರದಲ್ಲಿ ಕಲ್ಲಿನಿಂದ ಭೀಕರವಾಗಿ ಜಜ್ಜಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ವಿಜಯಪುರ ತಾಲ್ಲೂಕಿನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಗಳನ್ನು ಸಾಗರ್ ಬೆಳ್ಳುಂಡಗಿ (25), ಮತ್ತು ಇಸಆಕ್ ಕುರೇಶಿ (24) ಎಂದು ಗುರುತಿಸಲಾಗಿದೆ. ಕೊಲೆಯಾದವರು ಹಳೇ ದ್ವೇಶ ಅಥವಾ ವೈಷಮ್ಯಕ್ಕೆ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸ್ಥಳಕ್ಕೆ ಆಗಮಿಸಿದ ವಿಜಯಪುರ ಗ್ರಾಮದ ಪೊಲೀಸರು ಭೇಟಿ ನೀಡು ಪರಿಶೀಲನೆ ನಡೆಸುತ್ತಿದ್ದಾರೆ.
