ಪ್ರಪಂಚದಲ್ಲಿ ಉತ್ತಮವಾದ ಸಂಗಾತಿ ಅಥವಾ ಜೊತೆಗಾರ ಎಂದರೆ ಅದು ತಮ್ಮದೇ ಆದ ದೇಹ, ನಮ್ಮ ದೇಹವನ್ನು ನಾವು ಉತ್ತಮ, ಸದೃಢವಾಗಿ ನಿರ್ವಹಿಸಲು ಕೆಲ ನಿಯಮಗಳನ್ನು ಪಾಲನೆ ಮಾಡಬೇಕು.
1 ಧೂಮಪಾನ-ಮದ್ಯಪಾನ ತೊರೆಯಿರಿ

ಒತ್ತಡದ ಜೀವನದ ನಡುವೆ ಧೂಮಪಾನ ಮತ್ತು ಮದ್ಯಪಾನ ಕೂಡ ಜೀವನದ ಒಂದು ಭಾಗವಾಗಿದೆ, ಇದರಿಂದ ಬೇಗನೆ ಆರೋಗ್ಯದ ಆಯಸ್ಸು ಕ್ಷೀಣಿಸುತ್ತದೆ ಜೊತೆಯಲ್ಲಿ ಬೇಗನೆ ಸಾವು ಸಂಭವಿಸಬಹುದು, ಅಲ್ಲದೆ ಹಲವಾರು ತೊದರೆಗಳಾದ ಶ್ವಾಸಕೋಶ ತೊಂದರೆ , ಲೈಂಗಿಕ ಜೀವನದಲ್ಲಿ ದುಷ್ಪರಿಣಾಮ, ಕೂದಲು ಸಮಸ್ಯೆ ಜೊತೆ ಹಲವು ಸಮಸ್ಯೆಗಳು ಸಂಭವಿಸುತ್ತದೆ.
2 ಉತ್ತಮ ಆಹಾರ ಸೇವನೆ ಪದ್ಧತಿ ಬೆಳೆಸಿ

ಊಟ ಮಾಡುವಾಗ ಸಾಮಾನ್ಯವಾಗಿ ಎಲ್ಲರೂ ಟೇಬಲ್ ಚೇರ್ ಅಥವಾ ಸೋಫಾಗಳ ಬಳಕೆ ಹೆಚ್ಚಾಗಿ ಮಾಡುತ್ತಾರೆ. ಇದರಿಂದ ನಮಗೆ ಉತ್ತಮ ರೀತಿಯಲ್ಲಿ ದೇಹಕ್ಕೆ ಪ್ರಯೋಜನಕಾರಿಯಲ್ಲ. ಸರಿಯಾದ ಕ್ರಮ ನೆಲದ ಮೇಲೆ ಕುಳಿತು ಊಟ ಮಾಡುವುದು ದೇಹಕ್ಕೆ ಉತ್ತಮ.ಊಟ ಮಾಡುವಂಹ ಸಂದರ್ಭದಲ್ಲಿ ಹೆಚ್ಚಾಗಿ ಮೊಬೈಲ್, ಟಿವಿ, ಲ್ಯಾಪ್ಟಾಪ್ ಬಳಕೆ ಮಾಡುತ್ತಾರೆ, ಇದರಿಂದ ನಾವು ಊಟ ಮಾಡಿದ್ದೇವೆ ಅಥವಾ ಊಟ ಮಾಡಿದಂತಹ ಸಮಯದಲ್ಲಿ ನಾವು ಹೆಚ್ಚಾಗಿ ಎಷ್ಟೇ ಸೇವಿಸಿದರೂ ನಮಗೆ ಆಹಾರ ಸೇವಿಸಿದ ಭಾವನೆ ಸಿಗುವುದಿಲ್ಲ ಮತ್ತು ರುಚಿ ಸ್ವಾದವೂ ತಿಳಿಯುವುದಿಲ್ಲ.
3.ಸಮತೋಲಿತ ಆಹಾರ ಸೇವನೆ ಮಾಡಿ

ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ಉತ್ತಮ ಪೋಷಕಾಂಶಗಳುಳ್ಳ ಬಾದಾಮಿ ಗೊಡಂಬಿ ವಾಲ್ನಟ್ ನಂತಹ ಡ್ರೈ ಫ್ರೂಟ್ಸ್ಗಳನ್ನು ದಿನನಿತ್ಯ ಆಹಾರಕ್ಕೆ ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ದೇಹಕ್ಕೆ ಉತ್ತಮ ರೀತಿಯ ಶಕ್ತಿ ನೀಡುತ್ತದೆ ಅಲ್ಲದೆ ದೈನಂದಿನ ಚಟುವಟಿಕೆಗಳಲ್ಲಿ ಉತ್ಸಾಹಭರಿತವಾಗಿ ಕಾರ್ಯ ನಿರ್ವಹಿಸಲು ಸಹಾಯಕವಾಗಿದೆ.
4.ಋತುಮಾನದ ಆಹಾರ ಪದಾರ್ಥಗ ಸೇವನೆ

ಋತುಮಾನದ ಆಹಾರ ಪದಾರ್ಥಗಳು ಮತ್ತು ಹಣ್ಣು-ತರಕಾರಿಗಳು ಸೇರಿದಂತೆ ಸಿಟ್ರಸ್ ಹಣ್ಣುಗಳ ಸೇವನೆಯಿಂದ ನಮ್ಮ ದೇಹದ ಚರ್ಮ, ಕೂದಲು, ಕಣ್ಣು ಸೇರಿದಂತೆ ಹಲವು ಅಂಗಾಂಗಗಳ ಕಾರ್ಯನಿರ್ವಹಣೆಗೆ ಸಹಾಯಕವಾಗುತ್ತದೆ.
5 . ನಿಯಮಿತವಾಗಿ ವ್ಯಾಯಾಮ ಮಾಡಿ

ನಿಯಮಿತವಾಗಿ ದೈಹಿಕ ಮತ್ತ ಮಾನಸಿಕಲ ವ್ಯಾಯಾಮವನ್ನು ಮಾಡುತ್ತಾ ಬಂದರೆ ಮಾನಸಿಕವಾಗಿ ಮತತು ದೈಹಿಕವಾಗಿ ಸದೃಢವಾಗಿರಬಹುದು. ದೇಹದ ಎಲ್ಲಾ ಅಂಗಾಂಗಗಳು ಸರಾಗವಾಗಿ ಕಾರ್ಯ ನಿರ್ವಹಿಸುತ್ತದೆ ಜಡತ್ವವನ್ನು ಹೋಗಲಾಡಿಸಿ ಉತ್ತಮ ಸದೃಢರಾಗಿರಬಹುದು.
6 ಒತ್ತಡ ನಿರ್ವಹಣೆ ತಂತ್ರ ರೂಢಿಸಿಕೊಳ್ಳಿ
ತಮ್ಮ ವೇಗದ ಜೀವನಶೈಲಿಗೆ ತಕ್ಕಂತೆ ನಮ್ಮ ಕೆಲಸದ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ನಿವಾರಿಸಲು ಪ್ರತಿನಿತ್ಯ ಯೋಗ ಮತ್ತು ಧ್ಯಾನ ಮಾಡುವುದರಿಂದ ದೈಹಿಕವಾಗಿ ದೇಹದ ಕಾರ್ಯಚಟುವಟಿಕೆ ಮಾನಸಿಕವಾಗಿ ಮನಸ್ಸಿನ ಹಿಡಿತ ಮತ್ತು ಒತ್ತಡವನ್ನು ನಿವಾರಣೆ ಮಾಡಲು ಯೋಗ ಮತ್ತು ಧ್ಯಾನ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಉತ್ತಮ.
7. ಆದಷ್ಟು ಹೆಚ್ಚಾಗಿ ನೀರನ್ನು ಕುಡಿಯಿರಿ

ಪ್ರತಿನಿತ್ಯದ ಜೀವನದಲ್ಲಿ ನಮ್ಮ ದೇಹದ ಚಯಾಪಚಯ ಕ್ರಿಯೆ- ಕಾರ್ಯಚಟುವಟಿಕೆಗಳಲ್ಲಿ ನೀರಿನಪ್ರಾಮುಖ್ಯತೆ ಬಹಳ ಮುಖ್ಯವಾದದ್ದು ಪ್ರತಿದಿನ ಮುಂಜಾನೆ ಎದ್ದ ಕೂಡಲೇ ಬೆಚ್ಚನೆ ನೀರಿನ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಯೋಜನಗಳಿವೆ. ಅಲ್ಲದೆ ದಿನಕ್ಕೆ ೨ರಿಂದ ೩ ಲೀಟರ್ ನೀರನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ನಮ್ಮ ದೇಹದಲ್ಲಿನ ಹಾನಿಕಾರಕ ತ್ಯಾಜ್ಯ ಮತ್ತು ವಿಷದಂತಹ ತ್ಯಾಜ್ಯಗಳನ್ನು ಹೊರ ಹಾಕಿ ದೇಹವನ್ನು ಸ್ವಚ್ಛಗೊಳಿಸುವುದರ ಜೊತೆಗೆ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ
8.ಸ್ವ-ಔಷಧ ಪದ್ದತಿ ತೊರೆಯಿರಿ

ಸ್ವ-ಔಷಧ ಪದ್ಧತಿಯನ್ನು ತೊರೆಯಿರಿ, ನಾವು ಆರೋಗ್ಯದಲ್ಲಿ ಯಾವುದೇ ರೀತಿಯ ರೋಗಕ್ಕೆ ತುತ್ತಾದರೆ ತಾವೇ ಮನೆಯಲ್ಲಿ ಔಷಧವನ್ನು ಕಂಡುಕೊಳ್ಳುವುದನ್ನು ತಪ್ಪಿಸಿ , ವೈದ್ಯರಲ್ಲಿ ತೋರಿಸಿ ಸೂಕ್ತ ಔಷಧವನ್ನು ಸೇವಿಸುವುದು ಉತ್ತಮ.
9.ವೈದ್ಯಕೀಯ ತಪಾಸಣೆ ಮಾಡಿಸಿ

ಪ್ರತಿ ಆರು ತಿಂಗಳಿಗೊಮ್ಮೆ ನಿಮ್ಮ ದೇಹದ ಆರೋಗ್ಯ ತಪಾಸಣೆಯನ್ನು ಮಾಡಿಸುವುದು ಸೂಕ್ತ. ತಮ್ಮ ದೇಹವನ್ನು ತಪಾಸನೆ ಮಾಡಿಸುವುದರಿಂದ ದೇಹದ ಆಗು-ಹೋಗುಗಳನ್ನು ಮತ್ತು ದೇಹದ ಸುಧಾರಣೆಯಲ್ಲಿ ಬದಲಾವಣೆಯನ್ನು ಗಮನಿಸಿ ನಮ್ಮ ದೇಹದ ಸುಧಾರಣೆಗೆ ಸೂಕ್ತ ನಿಲುವನ್ನು ತೆಗೆದುಕೊಳ್ಳುವುದರ ಜೊತೆಗೆ ದೇಹಕ್ಕೆ ಸೂಕ್ತವಾದ ವಿಚಾರ-ವಿಷಯ- ಉಪಚಾರಗಳನ್ನು ಮಾಡಬಹುದಾಗಿದೆ.
10.ಆರೋಗ್ಯಕರ ಸಾಮಾಜಿಕ ಬಾಂಧವ್ಯ ಉಳಿಸಿ

ಕುಟುಂಬ, ಸ್ನೇಹಿತರು, ಬಂಧುಗಳ ಜೊತೆ ಉತ್ತಮ ಸಂಬಂಧದಲ್ಲಿ ಸಾಮಾಜಿಕವಾಗಿ ಎಲ್ಲರ ಜೊತೆಯಲ್ಲಿ ಸಂವಹನದಲ್ಲಿ ಉತ್ತಮ ಒಗ್ಗಟ್ಟು, ಸ್ನೇಹ ಸೌಹಾರ್ಧಯುತ ಸಂಬಂಧದೊಂದಿಗೆ ಜೀವನ ಸಾಗಿಸುವುದು.
ನಮ್ಮ ಜೀವನದ ಯಶಸ್ಸಿಗೆ ನಮ್ಮ ಜೀವನಶೈಲಿಯಲ್ಲಿ ಈ ಹತ್ತು ನಿಯಮಗಳನ್ನು ಪಾಲನೆ ಮಾಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ತತ್ವಗಳ ಪಾಲನೆ ಮಾಡುವುದರಿಂದ ನಮ್ಮ ಜೀವನವೂ ಉತ್ತಮವಾಗಿರುತ್ತದೆ.
