ರಾಯಚೂರು : ರಾಯಚೂರಿನ ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಗೆ ಗುತ್ತಿಗೆ ನೀಡಿದ್ದ ಎನ್.ಡಿ. ವಡ್ಡರ್ ಕಂಪನಿ. ಈಗ ಕಾಮಗಾರಿ ಪ್ರಗತಿಯಲ್ಲಿದ್ದು ಉಪ ಗುತ್ತಿಗೆದಾರರಿಗೆ ಹಣ ಕೊಡದೆ ಯಾಮಾರಿಸುತ್ತಿರುವ ಶಾಸಕ ಮನಪ್ಪ ವಜ್ಜಲ್. ಹಣವನ್ನು ವಾಪಸ್ ನೀಡುವಂತೆ ೨೦ ಬಾರಿ ಶಾಸಕರ ಬಳಿ ಮನವಿ ಮಾಡಿದ ಉಪ ಗುತ್ತಿಗೆದಾರರು,ಕಳೆದ ೨ ವರ್ಷಗಳಲ್ಲಿ 375 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ, ಇನ್ನು 4.87 ಕೋಟಿ ರೂಪಾಯಿ ಹಣವನ್ನು ಉಪ ಗುತ್ತಿಗೆದಾರರಿಂದ ಉಳಿಸಿಕೊಂಡ ಶಾಸಕರ ವಿರುದ್ದ ಉಪ ಗುತ್ತಿಗೆದಾರ ಶರಣಗೌಡ ಸುಂಕೇಶ್ವರಾಳ ನೇತೃತ್ವದಲ್ಲಿ ಲಿಂಗಸಗೂರು ಎಸಿ ಕಚೇರಿ ಬಳಿ ಕುಳಿತು ಪ್ರತಿಭಟನೆ ಮಾಡಿದರು.

