
ಚಳ್ಳಕೆರೆ: ನಕಲಿ ಚಿನ್ನವನ್ನು ಅಸಲಿ ಎಂದು ನಂಬಿಸಿ ಹಣ ಪೀಕಿದ ಖದೀಮರು.ಚಳ್ಳಕೆರೆಯಲ್ಲಿ ನಕಲಿ ಚಿನ್ನವನ್ನು ಅಸಲಿಯತ್ತು ಎಂದು ನಂಬಿಸಿ ವಂಚಿಸಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿಗಳು.ತಮಿಳುನಾಡಿನ ಮೂಲದವರಾದ ವೆಲ್ಡನ್ ಮತ್ತು ಹರಪನಹಳ್ಳಿ ಮೂಲದ ಕಿರಾತಕರು, ನಮ್ಮ ಮನೆ ಬುನಾದಿ ತೆಗೆಯುವಾಗ ಸಾಕಷ್ಟು ಬಂಗಾರ ಸಿಕ್ಕಿದೆ , ಬಂಗಾರವನ್ನು ಮಾರಾಟ ಮಾಡಲಿಕ್ಕೆ ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಓರ್ವ ವ್ಯಕ್ತಿಗೆ ತೋರಿಸಿ ಅಸಲಿ ಬಂಗಾರ ಎಂದು ನಂಬಿ ಬಂಗಾರವನ್ನು ಪಡೆದು ೩೦ ಲಕ್ಷ ಹಣವನ್ನು ನೀಡಿ ಮಿಕ್ಕ ಎಲ್ಲ ಬಂಗಾರವನ್ನು ನೀಡುವಂತೆ ಹೇಳಿದ್ದಾರೆ.ಇದನ್ನು ನಂಬಿದ ತಳಕು ವ್ಯಾಪ್ತಿಯ ಹಿರೇಹಳ್ಳಿಯ ಏಳು ಮಂದಿ ಹಣ ಕೊಟ್ಟು ಯಾಮಾರಿದ್ದಾರೆ. ಇನ್ನು ಇದರ ಬಗ್ಗೆ ನಂಬಿಕೆ ಬಾರದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಹಿಂದೆ ತನಿಖೆ ಆರಂಭಿಸಿದ ಎಸ್ಪಿ ರಂಜಿತ್ ಕುಮಾರ್ ಬಂಡಾರರ ತಂಡ , ೩೦ ಲಕ್ಷ ಪಡೆದ ಕಿರಾತಕರನ್ನು ಹೆಡೆಮುರಿ ಕಟ್ಟಿ ವಶಕ್ಕೆ ಪಡೆದಿದ್ದಾರೆ.
