ಮೈಸೂರು : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ನಂದಿನಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ನೆಲ ಹಾಸಿಗೆ ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಗೆ 2024-25 ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯಿತಿ ನೀಡಿದ 2 ಲಕ್ಚ ೩೦ ಸಾವಿರ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರೆ, ಕಾಮಗಾರಿ ಪರಿಶೀಲನೆಗೆಂದು ಬಂದ ಸಾಮಾಜಿಕ ಪರಿಶೋಧನಾ ಅಧಿಕಾರಿ ಯೊಗೇಶ್ ಪ್ರತಿಕ್ರಿಯೆ ನೀಡಿ “ ಇತ್ತ ಯಾವುದೇ ರೀತಿಯ ಕಾಮಗಾರಿ ನಡೆದಿಲ್ಲ, ಸುಖಾ ಸುಮ್ಮನೆ ಕಾಮಗಾರಿ ನಡೆದಿದೆ ಎಂದು ಕಳಪೆ ಬಿಲ್ ಪತ್ರವನ್ನು ಸೃಷ್ಟಿಸಿ ಸರ್ಕಾರಕ್ಕೆ ನೀಡಿದ್ದಾರೆ. ನರೇಗಾ ಯೋಜನೆಯಡಿ ಹಲವಾರು ಅಕ್ರಮಗಳು ನಡೆಯುತ್ತಿವೆ. ಅಂತಹ ಅಕ್ರಮಗಳಿಗೆ ಕಡಿವಾನ ಹಾಕುವ ಉದ್ದೇಶದಿಂದ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಎಂದು ಹುಣಸವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್ ಲೋಕೇಶ್ ತಿಳಿಸಿದರು.
