ಬಾಗಲಕೋಟೆ : ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಕುಟುಂಬ, ಇತ್ತ ಮಗ ಯಂಕಪ್ಪ ಕುಡಿತಕದ ಚಟಕ್ಕೆ ದಾಸನಾಗಿ ತಾಯಿಯ ಬಳಿ ಪದೇ ಪದೇ ಹಣದ ವಿಚಾರವಾಗಿ ವಾಗ್ವಾದ ಮಾಡುತ್ತಿದ್ದನು. ಮಗನ ಮಾತಿಗೆ ನಿರಾಕರಿ ಹಣ ನೀಡದ ಕಾರಣ ತನ್ನ ಮಗನೇ ಕುಡಿದ ಮತ್ತಿನಲ್ಲಿ ಯಾರು ಇಲ್ಲದ ಸಮಯದಲ್ಲಿ ಹೆತ್ತ ತಾಯಿಯನ್ನೇ ಮಾರಕಾಸ್ತ್ರವನ್ನು ಬಳಸಿ ಕೊಲೆ ಮಾಡಿ ನಂತರ ಅನುಮಾನ ಬಾರದಂತೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾನೆ. ಆರೋಪಿತ ಯಂಕಪ್ಪನನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಎಸ್ಪಿ,ಡಿಎಸ್ಪಿ, ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
