ಚಾಮರಾಜನಗರ : ಚಾಮರಾಜ ನಗರ ತಾಲ್ಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯ ವಾಟರ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕೂಸ್ ನಾಯಕ (65)ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.ಕಳೆದ 27 ತಿಂಗಳಿಂದ ಸರಿಯಾಗಿ ವೇತನ ನೀಡದ ಕಾರಣ ತನ್ನ ಸಾವಿಗೆ ಪಿಡಿಓ ಮತ್ತು ಅಧ್ಯಕ್ಷರೇ ಕಾರಣರೆಂದು ಡೆತ್ ನೋಟ್ನಲ್ಲಿ ಹೆರನ್ನು ಉಲ್ಲೇಖಿಸಿ ಹೊಂಗನೂರು ಗ್ರಾಮ ಪಂಚಾಯಿತಿ ಯ ಹೊರ ಭಾಗದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ರಾಮಸಮುದ್ರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹವನ್ನು ನಗರದ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
