ಗದಗ: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಬೀದಿ ನಾಯಿಗಳ ಹಾವಳಿ, ಗಂಭೀರವಾಗಿ ಪರಿಗಣಿಸಿದರೂ ನಿಲ್ಲದ ನಾಯಿಗಳ ಅಟ್ಟಹಾಸ, ಅದೇ ರೀತಿಯ ಘಟನೆಯೊಂದು ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ನಗರದ ಮಧ್ಯಭಾಗದಲ್ಲಿರುವ ಕೆ.ಹೆಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದ ಮುಂಭಾಗದಲ್ಲಿ ಸುಮಾರು 5-6 ನಾಯಿಗಳು ಗುಂಪುಗಟ್ಟಿಕೊಂಡು ಕಚ್ಚಾಡುತ್ತಿವೆ. ಅಲ್ಲಿನ ಪಾದಚಾರಿಗಳ ಮೇಲು ಎರಗಿ ಪುಟ್ಟ ಪಕ್ಕಳು ಸೇರಿದಂತೆ ಸಾರ್ವಜನಿಕರಿಗೂ ಸುಖಾಸುಮ್ಮನೆ ಕಚ್ಚಲು ಮುಮದಾಗುತ್ತಿವೆ. ಇದರ ಬಗ್ಗೆ ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆತೊಂದರೆ ನೀಡುತ್ತಿರುವ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸುವ ಕಾರ್ಯ ಮಾಡಬೇಕಿದೆ, ಮತ್ತು ನಾಯಿಗಳನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಬೇಕು ಎಂದು ಅಲ್ಲಿನ ಸಾರ್ವಜನಿಕರು ಮನವಿ ಮಾಡಿಕೊಳ್ಳುತಿದ್ದಾರೆ.
