
ಹಾನಗಲ್ : ರಾಮತೀರ್ಥ ಹೊಸಕೊಪ್ಪ ಗ್ರಾಮದ ಶಂಕರಪ್ಪ ಗುಮಗುಂಡಿ ಎಂಬುವರ ಆರ್ಟಿ.ಸಿ ದುರಸ್ಥಿ ಕಾರ್ಯ ಮಾಡಿಕೊದುವಂತೆ ಅರ್ಜಿಯನ್ನು ಸಲ್ಲಿಸಿದ್ದು ಆರೋಪಿಗಳು ದುರಸ್ತಿಕಾರ್ಯ ಮಾಡಿಕೊಡಲು ಸುಮಾರು 12,000 ರೂಪಾಯಿ ಹಣ ಲಂಚವನ್ನು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಕೀಲರಾದ ನವೀನ್ ಬಸವನಗೌಡ ಪಾಟೀಲ್ ಎಂಬುವರು ಲೋಕಾಯುಕ್ತ ಪೊಲೀಸ್ರಿಗೆ ದೂರು ನೀಡಿದ್ದರು. ಕಚೇರಿಯಲ್ಲಿಯೇ 12, ಸಾವಿರ ಲಂಚದ ಹಣವನ್ನು ಪಡೆಯುತ್ತಿರುವಾಗ ಹಾವೇರಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಮೂವ್ವರು ಆರೋಪಿಗಳನ್ನು ರೆಡ್ ಹ್ಯಾಂಡ ಆಗಿ ಹಿಡಿದು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.ಶಿರಸ್ತೆದಾರ ತಮ್ಮಣ್ಣ ಕಾಂಬಳೆ, ದ್ವಿತೀಯ ದರ್ಜೆ ಸಹಾಯಕ ಗೂಳಪ್ಪ ಮನಗೂಳಿ ಹಾಗೂ ಶಿವಾನಂದ ಬಡಿಗೇರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.
