
ಜಗಳೂರು : ಜಗಳೂರಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ತರಕಾರಿ ಸಾಮಗ್ರಿಗಳ ಕ್ರೈಟ್ ಖಾಲಿಯಾಗಿದ್ದು, ಹರಿದ ಹಾಸಿಗೆ ಸೇರಿ ಹಾಸ್ಟೆಲ್ ನಿರ್ವಹಣೆ ಮಾಡುವಲ್ಲಿ ವಾರ್ಡನ್ ತಿಪ್ಪೇಸ್ವಾಮಿ ವಿಫಲರಾಗಿದ್ದಾರೆ.

ಅಲ್ಲದೆ ವಿದ್ಯಾರ್ಥಿಗಳ ನಿರ್ವಹಣೆಗೆಂದು ನೀಡುವ ಅನುದಾನದ ಹಣವನ್ನು ತನ್ನ ಸ್ವಂತಿಕೆಗೆ ಬಳಸಿಕೊಳ್ಳುತ್ತಿರುವ ವಾರ್ಡನ್. ಇದಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ಹೆಚ್ಚುವರಿ ಹಣ ಖರ್ಚಿನ ನಕಲಿ ಬಿಲ್ ಸೃಷ್ಟಿಸಿ ನಂಬಿಸಿರುವ ಭ್ರಷ್ಟಾಚಾರ ಕೇಳಿಬರುತ್ತಿದೆ. ಇದರ ಬಗ್ಗೆ ಪ್ರಶ್ನಿಸಿದರೆ ತಾಲ್ಲೂಕು ಸಹಾಯಕ ನಿರ್ದೇಶಕರನ್ನು ಕೇಳಿ ಎಂದು ವಾರ್ಡನ್ ತನ್ನ ಉದ್ದಟತನದಿಂದ ಸರ್ಕಾರಿ ಪರ್ಮಾನನ್ನು ಉಲ್ಲಂಘನೆ ಮಾಡುವ ವಾರ್ಡನ್ ನಿರ್ವಾಹಕನಿಗೆ ಕಡಿವಾಣ ಹಾಕುವುದು ಯಾವಾಗ ?
