
ಬಾಗಲಕೋಟೆ : ನದಿ ನೀರಿನಲ್ಲಿ ಈಜಾಡಲು ಹೋದ ನಆಲ್ವರು ಸ್ನೇಹಿತರು, ನಾಲ್ವರಲ್ಲಿ ಓರ್ವ ಯುವಕ ನೀರುಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಗೋಪಶಾಲಿ ಗ್ರಾಮದಲ್ಲಿ ನಡೆದಿದೆ. ಮಧ್ಯಾಹ್ನ ತನ್ನ ಸ್ನೇಹಿತರೊಟ್ಟಿಗೆ ಈಜಾಡಲು ಹೋದ ಸಂದರ್ಭದಲ್ಲಿ ಪ್ರಜ್ವಲ್ ಮಹಾಂತೇಶ್ (15) ಈಜಾಡಲು ಹೋಗಿ ನೀರಿನಲ್ಲಿ ಮುಳುಗಿದ್ದಾನೆ. ಆತನ ಸ್ಣೆಹಿತರೆಲ್ಲರು ಸೇರಿ ಆತನನ್ನು ಹಡುಕಾಟ ನಡೆಸಿದರೂ ಆತನ ಸುಳಿವು ಸಿಗದ ಹಿನ್ನೆಲೆ ಮನೆಗೆ ತೆರಳಿ ಆತನ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಸಾಯಂಕಾಲದಿಂದ ಹುಡುಕಾಟ ನಡೆಸಿದರೂ ಯುವಕನ ಸುಳಿವು ಸಿಗಲಿಲ್ಲ. ಮುಂಜಾನೆ ಅಗ್ನಿಶಾಮಕದಳದಿಂದ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಹೊರ ತೆಗೆದರು. ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣಾ ಪೊಲೀಸ್ ಭೆಟಿ ನೀಡಿ ಪರಿಶೀಲನೆನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಬಾಳಿ ಬದುಕಬೇಕಾಗಿದ್ದ ಯುವಕ ಮೃತಪಟ್ಟಿರುವದ್ದರಿಂದ ತುಂಬ ಗ್ರಾಮದಲ್ಲಿ ಮೌನ ಆವರಿಸಿದೆ.
