ಗದಗ : ಗದಗದ ನಾಗಾವಿ ಹರ್ತಿ ಗ್ರಾಮದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ವಿಂಡ್ಫ್ಯಾನ್ ಕಂಪನಿ ವಿರುದ್ಧ ರೈತರು ಆಕ್ರೋಶ ಹಾಕಿದ್ದಾರೆ.ಕಳೆದ ಮೂರು ತಿಂಗಳಿನಿಂದದ ಪರಿಹಾರದ ಹಣಕ್ಕಾಗಿ ಕಚೇರಿಗೆ ಅಲೆದಾಡಿಸುತ್ತಿರುವ ಕಂಪನಿಯ ಬಾಗಿಲು ಮುಚ್ಚಿ ಬೀಗ ಹಾಕಿ ಗದಗದ ಎಸಿ ಕಚೇರಿಯೆದುರು ಪರಿಹಾರದ ಹಣ ನೀಡಬೇಕೆಂದು ಪರಿಹಾರಕ್ಕಾಗಿ ಪಟ್ಟು ಹಿಡಿದಿದ್ದಾರೆ.ಅವೈಜ್ಞಾನಿಕ ವಾಗಿ ಕಾಲುವೆ ನಿರ್ಮಾಣವಾಘಿರುವ ಹಿನ್ನೆಲೆ ಮಳೆ ನೀರು ಜಮೀನಿಗೆ ನುಗ್ಗಿ ರೈತರ ಸಾವಿರಾರು ಎಕರೆ ಬೆಳೆಹಾನಿಯಾಗಿದೆ. ಕಾಲುವೆ ನೀರು ಏಕಾಏಕಿ ನುಗ್ಗಿರುವುದರಿಂದ ಕೆರೆಯಂತೆ ಜಮೀನಿನ ಸುತ್ತ ನಿಂತಿದ್ದು,ಮೆಕ್ಕೆಜೋಳ, ಈರುಳ್ಳಿ ,ಶೇಂಗಾ ಸೇರಿ ಅನೇಕ ಬೆಳೆ ನಷ್ಟವಾಗಿ ರೈತ ಕಂಗಾಲಾಗಿದ್ದಾನೆ.ಪರಿಹಾರ ಕೇಳಲು ಹೋದ ರೈತರಿಗೆ ವಿಂಡ್ಕಂಪನಿ ಸಿಬ್ಬಂದಿಯು ಧಮ್ಕಿ ಹಾಕಿದ್ದಾನೆ, ತಾಳ್ಮೆ ಕಳೆದುಕೊಂಡ ರೈತರು ವಿಂಡ್ಫ್ಯಾನ್ ಕಂಪನಿ ಸಿಬ್ಬಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಇನ್ನು ಇದರ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿದ ಗದಗದ ತಹಶೀಲ್ದಾರ್ ಅಧಿಕಾರಿ ಶ್ರೀನಿವಾಸ ಕುಲಕರ್ಣಿಯಿಂದ ಕಂಪನಿಗೆ ಸೂಚನೆ ನೀಡಿದ್ದರು. ಅಲ್ಲದೆ ಕಂಪನಿಯಿಂದ ರೈತರಿಗೆ ನಷ್ಟವಾಗಿರುವ ಮೊತ್ತವನ್ನು ಭರಿಸಲು ಸೂಚನೆ ನೀಡಿದ್ದೇನೆ ಎಂದು ರೈತರಿಗೆ ಭರವಸೆ ನೀಡಿದರು.
