
ಬೆಂಗಳೂರು : ವೃತ್ತಿಯಲ್ಲಿ ಸರ್ಕಾರಿ ಪಶುವೈದ್ಯೆ, ದಿನನಿತ್ಯ ಪಶು ಚಿಕಿತ್ಸೆಯಲ್ಲೇ ಕಾಲ ಕಳೆದು ಹೋಗುತ್ತದೆ , ಇದರ ಮಧ್ಯೆ ಉತ್ತಮ ಡಯಟ್ , ಸಾಧಾರಣ ವ್ಯಾಯಾಮ ಮಾಡಿ ರಾಷ್ಟ್ರಮಟ್ಟದ ವೆಟಿಕೊ ಕ್ವೀನ್ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಹೆಮ್ಮೆಯ ಕನ್ನಡತಿ. ಯಾರವರು ಅಂತೀರಾ? ಸ್ಟೋರಿ ನೋಡಿ.
ಹೌದು, ಚಂದುಳ್ಳಿ ಚೆಲುವೆಯಂತೆಕಾಣುವ ಈಕೆಯ ಹೆಸರು ಡಾ. ಅನಿತಾ ಶ್ರೀ ರಾಮ್ , ಇವರು ಮೂಲತಃ ಬೆಂಗಳೂರಿನ ಮಹದೇವಪುರ ಕ್ಷೇತ್ರದ ನಿವಾಸಿ, ವೃತ್ತಿಯಲ್ಲಿ ಸರ್ಕಾರಿ ಪಶುವೈದ್ಯೆ ಇದರ ಜೊತೆಯಲ್ಲಿ ವೆಟಿಕೊ ಕ್ವೀನ್ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ 2025 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ , ಬಿಡುವಿಲ್ಲದ ಕೆಲಸದಲ್ಲಿದ್ದರೂ ಉತ್ತಮ ಡಯಟ್, ಉತ್ಕೃಷ್ಟ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೋಡುಗರ ನಿಬ್ಬೆರಗಾಗುವಂತಹ ಮೈಮಾಟವನ್ನು ಹೊಂದಿದ್ದಾರೆ.
ಭಾರತದ ಛತ್ತೀಸ್ಘಡ್ನಲ್ಲಿ ನಡೆದ ವೆಟಿಕೊ ಕ್ವೀನ್ ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಯಿಂದ ಪಶುವೈದ್ಯರೇ ಭಾಗವಹಿಸುವ ಸ್ಪರ್ಧೆಯಲ್ಲಿ ಇವರು ಭಾಗಿಯಾಗಿ ಸುಂದರಿಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವುದರ ಜೊತೆಗೆ ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ನಿನ್ನಿಂದ ಆಗೋದಿಲ್ಲ, ಇರುವ ವೃತ್ತಿಯನ್ನೇ ಮುಂದುವರಿಸು ಇವೆಲ್ಲ ಯಾಕೆ ಬೇಕು ಎಂದವರಿಗೆ ಮೂಗುದಾರ ಹಾಕಿ ಪ್ರಶಸ್ತಿಯನ್ನು ಹೊತ್ತು ತಾಯಿನಾಡಿಗೆ ಬಂದ ಸುಂದರಿ ಡಾ. ಅನಿತಾ ಶ್ರೀರಾಮ್. ಸಾಧನೆಗೆ ಮುಂದಾದಾಗ ಅಡೆತಡೆಗಳು ಇದ್ದದ್ದೇ ಅದನ್ನು ಎದುರಿಸಿ ಮುಂದೆ ಸಾಗಿದರೆ ಸನ್ಮಾನದ ಕಿರೀಟ ದೊರೆಯುತ್ತದೆ ಎಂಬುದಕ್ಕೆ ಡಾ. ಅನಿತಾ ಶ್ರೀ ರಾಮ್ ಅವರು ಪ್ರೇರಣೆಯ ರೂವಾರಿಗಾರಿ ಗುರುತಿಸಿಕೊಂಡಿದ್ದು ಹೆಮ್ಮೆಯ ಸಂಗತಿ.!
