ಬೆಳಗಾವಿ : ಬೆಳಗಾವಿ ಜಿಲ್ಲೆಯ ಗ್ರಾಮದ ಕುರಿದಡ್ಡಿಯ ಹತ್ತಿರ ಇರುವ ಗಾವಠಾಣ ಜಾಗೆಯಲ್ಲಿ ಕೆಲವೊಂದು ಖಾಸಗಿ ವ್ಯಕ್ತಿಗಳು ಅನಧೀಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಅದನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ಧರಣಿ ಕುಳಿತಿದ್ದಾರೆ.ಗಾವಠಾಣ ಸ್ಥಳದಲ್ಲಿ ಶೌಚಾಲಯ ಮತ್ತು ಸಮುದಾಯ ಭವನ ನಿರ್ಮಾಣ ಮಾಡುವಂತಹ ಅಭಿವೃದ್ಧಿ ಕೆಲಸಗಳು ಮೀಸಲಿದ್ದು, ಅದರ ಬದಲಾಗಿ ಅನಧೀಕೃತವಾಗಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವ ಹಿನ್ನೆಲೆ ನಿರ್ಮಾಣದ ಕಾರ್ಯವನ್ನು ತಕ್ಷಣ ನಿಲ್ಲಿಸಿ ಅದನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಬೇಕೆಂದು ಪಂಚಾಯತ್ ಆವರಣದಲ್ಲಿ ಪಗಡೆ ಆಡುವ ಮುಖಾಂತರ ಅಹೋರಾತ್ರಿ ಧರಣಿಯನ್ನು ಮಾಡಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಮಲ್ಲಪ್ಪಾ ಡವಳೇಶ್ವರ ಪಂಚಾಯತ್ ಸದಸ್ಯರಾದ ಶಿವಲಿಂಗ ಹೊಸ್ತೋಟ, ಮುತ್ತಪ್ಪ ಡವಳೇಶ್ವರ, ಲಕ್ಷ್ಮಣ ಖಾನಟ್ಟಿ, ಹಾಗೂ ಗ್ರಾಮದ ದುರಿನರಾದ ದುರ್ಗಪ್ಪ ಕೆಳಗಡೆ, ಪ್ರಕಾಶ್ ಪಾಟೀಲ, ಶಂಬಪ್ಪ ಸೌದಿ, ಮಲ್ಲಪ್ಪ ಬೆಳಗಲಿ, ಬಸು ಅಂದಾನಿ,ಕಾಮಣ್ಣ ಬೆಳಗಲಿ,ಅರ್ಜುನ ಕಿತ್ತೂರ ಸೇರಿದಂತೆ ಪಂಚಾಯತ್ ಸದಸ್ಯರು, ಸಾರ್ವಜನಿಕರು ಭಾಗಿಯಾಗಿದ್ದರು.
